ಕಾಸರಗೋಡು: ಯುವ ಜನತೆಯಲ್ಲಿ ಚುನಾವಣಾ ಜಾಗೃತಿಯನ್ನು ಮೂಡಿಸುವುದರ ಅಂಗವಾಗಿ ಭಾರತ ಚುನಾವಣಾ ಆಯೋಗವು ಸ್ವೀಪ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಮದರಂಗಿ(ಮೆಹಂದಿ) ಸ್ಪರ್ಧೆ ನಡೆಯಿತು.
ಜಿಲ್ಲಾಧಿಕಾರಿಗಳ ಕಾನರೆನ್ಸ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ಪಂಚಾಯತಿಗಳಿಂದಾಗಿ 17 ತಂಡಗಳು ಭಾಗವಹಿಸಿತು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ ಉದ್ಘಾಟಿಸಿದರು. ಸ್ವೀಪ್ ನೋಡಲ್ ಅಧಿಕಾರಿ ಟಿ.ಟಿ.ಸುರೇಂದ್ರನ್ ಅಧ್ಯಕ್ಷ್ಷತೆ ವಹಿಸಿದ್ದರು. ವಿಜೇತರಿಗೆ ಚುನಾವಣಾ ಡೆಪ್ಯೂಟಿ ಕಲೆಕ್ಟರ್ ಪಿ.ಅಖಿಲ್, ವಾರ್ತಾಧಿಕಾರಿ ಎಂ.ಮಧುಸೂದನನ್, ಚುನಾವಣಾ ಜೂನಿಯರ್ ಸುಪರಿಂಟೆಂಡೆಂಟ್ ಜಿ.ಕೆ.ಸುರೇಶ್ ಬಾಬು ವಿತರಿಸಿದರು. ಕುಟುಂಬಶ್ರೀ ಎಡಿಎಂ ಸಿ.ಸಿ.ಎಚ್. ಇಕ್ಬಾಲ್, ಜಿಲ್ಲಾ ಪ್ರೋಗ್ರಾಂ ಮೆನೇಜರ್‍ಗಳಾದ ಎಂ.ರೇಷ್ಮಾ, ಇ.ಶಿಬಿ, ಪಿ.ರತ್ನೇಶ್, ಯದುರಾಜ್ ಉಪಸ್ಥಿತರಿದ್ದರು.