ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯದ ಆಶ್ರಯದಲ್ಲಿ “ಪುಸ್ತಕ ಕಣಿ ಮತ್ತು ವಿಷು ಕೈನೀಟ್ಟಂ”(ವಿಷು ಕೈತುಂಬ) ಕಾರ್ಯಕ್ರಮ ಭಾನುವಾರ ನಡೆಯಿತು. ಬಜೆ ಕಾಲೇಜು ಪ್ರಾಧ್ಯಾಪಕ ಪಿ.ರಾಜೇಶ್ ಉದ್ಘಾಟಿಸಿದರು. ಗಂಗಾಧರನ್ ಎನ್ ಮಕ್ಕಳಿಗೆ ವಿಷು ಕೊಡುಗೆಗಳನ್ನು ವಿತರಿಸಿದರು.
ಕೆ.ಕೆ.ಮೋಹನನ್, ರಂಜಿತ್ ಕೆ.ಕೆ, ಸಂತೋಷ್ ಟೈಪ್ ಲುಕ್, ಪ್ರಭಾಕರ ಆಚಾರ್ಯ, ಗಂಗಾಧರನ್ ಎನ್, ವಿಶಾಲ್ ಮುಳ್ಳೇರಿಯ ಶುಭಹಾರೈಸಿ ಮಾತನಾಡಿದರು.