ಮುಳ್ಳೇರಿಯ: ಅಡೂರಿನ ವಿದ್ಯಾಭಾರತೀ ವಿದ್ಯಾಲಯದಲ್ಲಿ ಬುದವಾರ ಅಡೂರಿನ ಶ್ರೀರಾಮೋತ್ಸವ ಸಮಿತಿ ಆಶ್ರಯದಲ್ಲಿ ಸಂಭ್ರಮದ ಶ್ರೀರಾಮೋತ್ಸವ ಕಾರ್ಯಕ್ರಮ ನಡೆಯಿತು.
ತಲ್ಪಚ್ಚೇರಿ ಪರಮೇಶ್ವರ ಕಲ್ಲೂರಾಯರು ಧಾರ್ಮಿಕ ವಿಧಿವಿದಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮೂಲ ರಾಮಾಯಣ ಪಾರಾಯಣ, ಶ್ರೀರಾಮ ರಕ್ಷಾ ಸ್ತೋತ್ರ, aಭಜನೆ, ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀರಾಮ ತಾರಕ ಮಂತ್ರದ ಪಾರಾಯಣ ಮೊದಲಾದ ಕಾರ್ಯಕ್ರಮಗಳು ನಡೆದುವು. ಕಾರ್ಯಕ್ರಮದಲ್ಲಿ ವಿದ್ಯಾಭಾರತೀ ವಿದ್ಯಾಲಯದ ಅಧ್ಯಕ್ಷೆ ಸತ್ಯಪ್ರೇಮಾ ಎಂ ಭಾರಿತ್ತಾಯ, ಅಡೂರು ಶ್ರೀರಾಮೋತ್ಸವ ಸಮಿತಿ ಸಂಚಾಲಕ ಚರಕಂಡ ರಾಧಾಕೃಷ್ಣ ಮೇರ್ಟ, ವಿದ್ಯಾಭಾರತೀ ವಿದ್ಯಾಲಯದ ಆಡಳಿತ ಸಮಿತಿ ಮುಖಂಡರಾದ ವೆಂಕಟ್ರಾಜ್ ಅಡೂರು, ಶಾರದಾದೇವಿ ಬೈತನಡ್ಕ, ನಿವೃತ್ತ ಶಿಕ್ಷಕ ಕಾಯರ್ತಿಮಾರು ರಾಜಾರಾಮ ಸರಳಾಯ, ಸಾಮಾಜಿಕ ಮುಖಂಡರಾದ ಪ್ರಕಾಶ ಪಾಂಙಣ್ಣಾಯ ಮೊದಲಾದವರು ಭಾಗವಹಿಸಿದ್ದರು. ಅನೇಕ ಮಂದಿ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.