ತಿರುವನಂತಪುರಂ: ನಿಯಮ ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳಿಂದ ದಂಡ ವಸೂಲಿ ಮಾಡುವಲ್ಲಿ ಕಾಸರಗೋಡು ಮೀನುಗಾರಿಕಾ ಇಲಾಖೆ ರಾಜ್ಯದಲ್ಲೇ ಪ್ರಥಮವಾಗಿದೆ.
2023-24ರ ಆರ್ಥಿಕ ವಷರ್Àದಲ್ಲಿ ಕಾಸರಗೋಡು ಮೀನುಗಾರಿಕೆ ಇಲಾಖೆಯು ಅಕ್ರಮ ಮೀನುಗಾರಿಕೆಗಾಗಿ 68 ಲಕ್ಷ ರೂ.ಗಳನ್ನು ದಂಡವಾಗಿ ಸಂಗ್ರಹಿಸಿದೆ.
ಸಮುದ್ರದಲ್ಲಿ ರಾತ್ರಿ ಗಸ್ತು ಬಿಗಿಗೊಳಿಸಿರುವುದು ದಂಡ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದೇ ಪ್ರಥಮ ಬಾರಿಗೆ ಕಾಸರಗೋಡು ಮೀನುಗಾರಿಕಾ ಇಲಾಖೆ ಈ ಸಾಧನೆ ಮಾಡಿದೆ. 40 ಲಕ್ಷ ದಂಡದೊಂದಿಗೆ ಎರ್ನಾಕುಳಂ ಎರಡನೇ ಸ್ಥಾನದಲ್ಲಿದ್ದು, 36 ಲಕ್ಷ ದಂಡದೊಂದಿಗೆ ತ್ರಿಶೂರ್ ಮೂರನೇ ಸ್ಥಾನದಲ್ಲಿದೆ.
ದಂಡಗಳಲ್ಲಿ ನೈಟ್ ಟ್ರಾಲಿಂಗ್, ಲೈಟ್ ಫಿಶಿಂಗ್, ಪರ್ಸ್ ಸೀನ್ ಬಲೆಗಳ ಬಳಕೆ, ಲೈಸೆನ್ಸ್ ಅಥವಾ ಪರ್ಮಿಟ್ ಇಲ್ಲದೆ ಮೀನುಗಾರಿಕೆ, ತೀರದ ಟ್ರಾಲಿಂಗ್, ಸಣ್ಣ ಮೀನುಗಳನ್ನು ಹಿಡಿಯುವುದು ಮತ್ತು ಜೋಡಿ ಟ್ರಾಲಿಂಗ್ (ಎರಡು ದೋಣಿಗಳನ್ನು ಜೋಡಿಸಿ ಮೀನುಗಾರಿಕೆ) ಸೇರಿವೆ.
ದಂಡವು 5000 ರಿಂದ 2.5 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. 280 ಮೇಲ್ಪಟ್ಟ ಎಚ್.ಪಿ. ಎಂಜಿನ್ ಹೊಂದಿರುವ ದೊಡ್ಡ ದೋಣಿಗಳಿಗೆ 2.5 ಲಕ್ಷ ರೂ. ರಾತ್ರಿ ಟ್ರೋಲಿಂಗ್‍ಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ.
ಕಾಸರಗೋಡು ಮೀನುಗಾರಿಕಾ ಇಲಾಖೆ, ಕೋಸ್ಟಲ್ ಪೋಲೀಸ್ ಹಾಗೂ ಮೆರೈನ್ ಎನ್‍ಪೋರ್ಸ್‍ಮೆಂಟ್ ಇಲಾಖೆ ಜಂಟಿಯಾಗಿ ರಾತ್ರಿ ಗಸ್ತು ನಡೆಸುತ್ತಿವೆ. ಕರ್ನಾಟಕದ ಬೋಟ್ ಗಳು ಹೆಚ್ಚಾಗಿ ಉಲ್ಲಂಘನೆಯಲ್ಲಿ ತೊಡಗಿವೆ.