ಹೈದರಾಬಾದ್: ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಅಭಿನಯದ 'ಕಲ್ಕಿ 2898 ಎಡಿ' ಸಿನಿಮಾ ರಿಲೀಸ್ಗೂ ಮುನ್ನ ಗಮನ ಸೆಳೆಯುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ತಂಡ ರಿವೀಲ್ ಮಾಡಿದೆ.

ಈ ಮೊದಲು ರಿಲೀಸ್ ಆದ 'ಕಲ್ಕಿ' ಟೀಸರ್ನಲ್ಲಿ ಪ್ರಭಾಸ್ ರನ್ನು ಹೈಲೈಟ್ ಮಾಡಲಾಗಿತ್ತು. ಅಮಿತಾಭ್ ಬಚ್ಚನ್ ಅವರು ಹೀಗೆ ಬಂದು ಹಾಗೆ ಹೋಗಿದ್ದರು. ಆದರೆ, ಈಗ ಅವರ ಸಂಪೂರ್ಣ ಪಾತ್ರ ಪರಿಚಯ ಮಾಡಲಾಗಿದೆ. ಮಹಾಭಾರತದ ಅಶ್ವಾತ್ಥಾಮನಾಗಿ ಅವರು ಕಾಣಿಸಿಕೊಂಡಿದ್ದಾರೆ. ಮಹಾಭಾರತದಿಂದ ಸಿನಿಮಾದ ಕಥೆ ಆರಂಭವಾಗಲಿದೆ ಎಂದು ನಿರ್ದೇಶಕ ನಾಗ್ ಅಶ್ವಿನ್ ಅವರು ಈ ಮೊದಲು ಹೇಳಿಕೊಂಡಿದ್ದರು.
ಇನ್ನು ಈ ಸಿನಿಮಾದ ಪಾತ್ರವರ್ಗ ದೊಡ್ಡದಿದೆ. ಕಮಲ್ ಹಾಸನ್ ಸೇರಿ ಅನೇಕರು ನಟಿಸುತ್ತಿದ್ದಾರೆ. ದೊಡ್ಡ ಬಜೆಟ್ ನ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರನ್ನು ಪರಿಚಯಿಸೋ ಟೀಸರ್ ನೋಡಿದವರಿಗೆ ಮತ್ತೊಂದು ಕುತೂಹಲವೂ ಮೂಡಿದೆ.
'ಕಲ್ಕಿ 2898 ಎಡಿ' ಸಿನಿಮಾ ಮೇ 9ರಂದು ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿದೆ. ಆದರೆ, ಈಗ ರಿಲೀಸ್ ಆದ ಟೀಸರ್ನಲ್ಲಿ ಸಿನಿಮಾದ ರಿಲೀಸ್ ದಿನಾಂಕ ಇಲ್ಲ. ಜೊತೆಗೆ ತಂಡ ಯಾವುದೇ ಪ್ರಚಾರದಲ್ಲೂ ಭಾಗಿ ಆಗುತ್ತಿಲ್ಲ. ಹೀಗಾಗಿ, ಸಿನಿಮಾ ಸದ್ಯಕ್ಕೆ ರಿಲೀಸ್ ಆಗುವುದು ಅನುಮಾನ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.