ಕುಂಬಳೆ : ಮನೆಯಲ್ಲಿ ನಿದ್ರಿಸುತ್ತಿದ್ದ ಯುವಕನನ್ನು ಎಬ್ಬಿಸಿ, ಕಾರಲ್ಲಿ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗಾಂಜಾ ಸಾಗಾಟ ಪ್ರಕರಣದ ಆರೋಪಿ ಸೇರಿದಂತೆ ನಾಲ್ವರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ನರಹತ್ಯಾ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಕಡಂಬಾರ್ ನಿವಾಸಿ ಇರ್ಷಾದ್, ಬಂಬ್ರಾಣ ನಿವಾಸಿ ಕಿರಣ್ ರಾಜ್ ಸೇರಿದಂತೆ ನಾಲ್ಕು ಮಂದಿಗೆ ಈ ಕೇಸು.
ತಂಡ ನಡೆಸಿದ ಹಲ್ಲೆಯಿಂದ ಗಂಭಿರ ಗಾಯಗೊಂಡಿರುವ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಮಹಮ್ಮದ್ ಫಾರೂಕ್(35)ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ತಿರುವನಂತಪುರದಲ್ಲಿ ಹೋಟೆಲ್ ಕಾರ್ಮಿಕನಾಗಿರುವ ಮಹಮ್ಮದ್ ಫಾರೂಕ್ ಹತ್ತು ದಿವಸಗಳ ಹಿಂದೆ ಊರಿಗೆ ಆಗಮಿಸಿದ್ದು, ಬಪ್ಪಾಯಿತೊಟ್ಟಿಯ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಮಂಗಳವಾರ ನಸುಕಿನ 2ಗಂಟಗೆ ಇರ್ಷಾದ್ ನೇತೃತ್ವದಲ್ಲಿ ಕಾರಲ್ಲಿ ಆಗಮಿಸಿದ ತಂಡ, ತುರ್ತಾಗಿ ಬಂಬ್ರಾಣ ತೆರಳಲಿರುವುದಾಗಿ ಕಾರಿಗೇರಿಸಿ ಬಂಬ್ರಾಣ ಬಯಲಿಗೆ ಕರೆದೊಯ್ದು ಅಲ್ಲಿನ ಮನೆಯೊಂದರ ಎದುರು ಇಒಳಿಸಿದ್ದನು. ಅಲ್ಲಿಗೆ ಕಿರಣ್‍ರಾಜ್ ಮತ್ತು ತಂಡ ಆಗಮಿಸಿ ಮಹಮ್ಮದ್ ಫಾರೂಕ್ನನ್ನು ಮಾರಕಾಯುಧಗಳಿಂದ ಥಳಿಸಿ, ಗಂಭೀರ ಗಾಯಗೊಳಿಸಿದೆ. ಅಬೋಧಾವಸ್ಥೆಗೆ ತೆರಳಿದ ನಂತರ ಇರ್ಷಾದ್ ಅದೇ ಕಾರಿನಲ್ಲಿ ಈತನನ್ನು ಬಪ್ಪಾಯಿತೊಟ್ಟಿಯ ಮನೆಗೆ ತಂದು ಬಿಟ್ಟಿದ್ದರು. ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಮ್ಮದ್ ಫಾರೂಕ್ ಅವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಕಿರಣ್‍ರಾಜ್ ಇತ್ತೀಚೆಗೆ ಮಂಗಳೂರಿನಲ್ಲಿ ಭಾರಿ ಪ್ರಮಾಣದ ಗಾಂಜಾ ವಶಪಡಿಸಿಕೊಮಡ ಪ್ರಕರಣದಲ್ಲಿ ಆರೋಪಿಯಾಘಿದ್ದು, ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಗೊಂಡಿರುವುದಾಘಿ ಪೊಲಿಸರು ತಿಳಿಸಿದ್ದಾರೆ.