ನವದೆಹಲಿ: 'ಸವಾಲುಗಳನ್ನು ಎದುರಿಸಲು ತಾನು ಎಷ್ಟರಮಟ್ಟಿಗೆ ಸಜ್ಜಾಗಿದ್ದೇನೆ ಎಂಬುದನ್ನು ಅರಿಯುವ ಯತ್ನದ ಭಾಗವಾಗಿ ಪೂರ್ವ ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ಸಮರಾಭ್ಯಾಸ ನಡೆಸಲಾಗಿದೆ' ಎಂದು ಭಾರತೀಯ ನೌಕಾಪಡೆ ಶನಿವಾರ ಹೇಳಿದೆ.
ನವದೆಹಲಿ: 'ಸವಾಲುಗಳನ್ನು ಎದುರಿಸಲು ತಾನು ಎಷ್ಟರಮಟ್ಟಿಗೆ ಸಜ್ಜಾಗಿದ್ದೇನೆ ಎಂಬುದನ್ನು ಅರಿಯುವ ಯತ್ನದ ಭಾಗವಾಗಿ ಪೂರ್ವ ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ಸಮರಾಭ್ಯಾಸ ನಡೆಸಲಾಗಿದೆ' ಎಂದು ಭಾರತೀಯ ನೌಕಾಪಡೆ ಶನಿವಾರ ಹೇಳಿದೆ.
'ಪೂರ್ವಿ ಲೆಹರ್' ಹೆಸರಿನ ಈ ಸಮರಾಭ್ಯಾಸದಲ್ಲಿ ಯುದ್ಧನೌಕೆಗಳು, ಜಲಾಂತರ್ಗಾಮಿಗಳು, ವಿಮಾನಗಳು ಮತ್ತು ನೌಕಾಪಡೆಯ ವಿಶೇಷ ತಂಡಗಳು ಪಾಲ್ಗೊಂಡಿದ್ದವು.
ಹಲವು ಹಂತಗಳಲ್ಲಿ ಅಭ್ಯಾಸ ನಡೆಸಲಾಗಿದೆ. ವಾಸ್ತವಕ್ಕೆ ಹತ್ತಿರವಾದ ಸನ್ನಿವೇಶದಲ್ಲಿ ಎದುರಾಳಿಗಳ ಜೊತೆ ಸೆಣೆಸಾಟದ ತರಬೇತಿ, ಹಲವು ಬಗೆಯ ಶಸ್ತ್ರಾಸ್ತ್ರಗಳ ಬಳಕೆಯ ಅಭ್ಯಾಸ ನಡೆಸಲಾಗಿದೆ ಎಂದು ನೌಕಾಪಡೆ ಹೇಳಿದೆ.
ನೌಕಾಪಡೆಯ ಪೂರ್ವ ಕಮಾಂಡ್ ಮಾತ್ರವೇ ಅಲ್ಲದೆ ಭಾರತೀಯ ವಾಯುಪಡೆ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕೂಡ ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದರು. ಇದು ವಿವಿಧ ವಿಭಾಗಗಳ ಸಿಬ್ಬಂದಿಗಳ ನಡುವೆ ಹೆಚ್ಚಿನ ಪ್ರಮಾಣದ ಸಮನ್ವಯವನ್ನು ತೋರಿಸಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.