ಮಂಜೇಶ್ವರ: ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಭಕ್ತಿ, ನಿಷ್ಠೆಯಿದ್ದಲ್ಲಿ, ಅಂತಹ ಕೆಲಸ ಸುಲಭವಾಗಿ ನೆರವೇರುವುದಾಗಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಅವರು ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಅಡಪ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಗಣೇಶ ಭಟ್, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ರಾಕೇಶ್ ಶೆಟ್ಟಿ, ಚಂದ್ರಹಾಸ ಕಣಂತೂರು, ಹರಿಕಿರಣ್ ಬಂಗೇರ, ದುರ್ಗಾದಾಸ್ ಭಂಡಾರಿ, ಜಯಪ್ರಕಾಶ್ ಶೆಟ್ಟಿ ಭಂಡಾರಮನೆ, ಪ್ರಕಾಶ್ ಕಾಜವ, ಅಶ್ವಿನಿ ಎಂ.ಎಲ್ ಪಜ್ವ ಉಪಸ್ಥಿತರಿದ್ದರು. ಪ್ರಶಾಂತ್ ಭಂಡಾರಿ ಸ್ವಾಗತಿಸಿದರು. ರವೀಂದ್ರ ಕುಲಾಲ್ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕುಮಾರ್ ಬಲಿಪಗುಳಿ ವಂದಿಸಿದರು. ಸಾಂಸ್ಕøತಿಕ ಖಾರ್ಯಕ್ರಮದ ಅಮಗವಾಗಿ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಿತು.
ಇಂದು ಬ್ರಹ್ಮಕಲಶೋತ್ಸವ:
ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 5ರಂದು ಬೆಳಗ್ಗೆ 8.50ರಿಂದ 10.45ರ ಮಧ್ಯೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ನಂತರ ಪರಿಕಲಶಾಭಿಷೇಕ ನಡೆಯುವುದು.