HEALTH TIPS

ಲೋಕಸಭಾ ಚುನಾವಣೆ: ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ

            ಕಾಸರಗೋಡು: ಲೋಕಸಭಾ ಚುನಾವಣೆ 2024 ಪ್ರಚಾರದ ಭಾಗವಾಗಿ ದೂರದರ್ಶನ ಚಾನೆಲ್ ಗಳಲ್ಲಿ, ಕೇಬಲ್ ನೆಟ್ ವರ್ಕ್ ಗಳಲ್ಲಿ, ಖಾಸಗಿ ರೇಡಿಯೋ ಎಫ್‍ಎಂ ಚಾನೆಲ್ ಗಳಲ್ಲಿ, ಸಿನಿಮಾ ಮಂದಿರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ನೀಡುವ ಜಾಹೀರಾತುಗಳಿಗೆ ಪ್ರಮಾಣ ಪತ್ರದ ಅಗತ್ಯವಿದೆ ಎಂದು ಮಾಧ್ಯಮ ಪ್ರಮಾಣೀಕರಣ ಹಾಗು ಮೇಲ್ವಿಚಾರಣಾ ಸಮಿತಿಯ(ಎಂಸಿಎಂಸಿ) ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ. ಕೆ.ಇನ್ಬಾಶೇಖರ್ ತಿಳಿಸಿದ್ದಾರೆ 

           ರಾಷ್ಟ್ರೀಯ ಯಾ ರಾಜ್ಯಅಂಗೀಕಾರ ಪಡೆದಿರುವ ಪಕ್ಷಗಳ ಅಭ್ಯರ್ಥಿಗಳು ಮತ್ತು ಪ್ರತಿನಿಧಿಗಳು ಜಾಹೀರಾತು ನೀಡುವ ಮೂರು ದಿನಗಳ ಮೊದಲು ಮತ್ತು ಇತರ ಸಂಸ್ಥೆಗಳು ಅಥವಾ ವ್ಯಕ್ತಿಗಳಾದರೆ ಏಳು ದಿನಗಳ ಮೊದಲು ನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಬೃಹತ್ ಎಸ್‍ಎಂಎಸ್ ಮತ್ತು ಧ್ವನಿ ಸಂದೇಶಗಳಿಗೆ ಪೂರ್ವ- ಪ್ರಮಾಣೀಕರಣದ ಅಗತ್ಯವಿದೆ. ಎಂಸಿಎಂಸಿಯ ಅಂಗೀಕರಕ್ಕಾಗಿ ಸಲ್ಲಿಸುವ ಜಾಹೀರಾತುಗಳನ್ನು ಮೌಲ್ಯಮಾಪನ ಮಾಡಿ ಸಮಿತಿಯು 24 ಗಂಟೆಗಳ ಒಳಗೆ ತೀರ್ಮಾನ ಪ್ರಕಟಿಸಲಿದೆ.  ಷರತ್ತುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲವೆಂದು ಮನವರಿಕೆಯಾದರೆ ಜಾಹೀರಾತಿನ ಅನುಮತಿಯನ್ನು ನಿರಾಕರಿಸುವ ಅಧಿಕಾರ ಸಮಿತಿಗೆ ಇರಲಿದೆ.


             ಜಾಹೀರಾತಿನ ವಿದ್ಯುನ್ಮಾನ ರೂಪದಲ್ಲಿರುವ (ಪೆನ್‍ಡ್ರೈವ್,  ಸಿಡಿ ಯಾ ಡಿವಿಡಿ) ಎರಡು ಪ್ರತಿಗಳು ಮತ್ತು ದೃಢೀಕರಿಸಿದ ಪ್ರತಿ ಲೇಖನವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

               ಜಾಹೀರಾತು ನಿರ್ಮಾಣಕ್ಕಾಗಿ ತಗಲುವ ವೆಚ್ಚ, ಪ್ರಸಾರದ ವೆಚ್ಚ, ಯಾವ ಅಭ್ಯರ್ಥಿಗಾಗಿ, ಯಾವ ಪಕ್ಷಕ್ಕಾಗಿ ಎಂಬ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸ್ಪಷ್ಟಪಡಿಸಿ ಅರ್ಜಿ ಸಲ್ಲಿಸಬೇಕು. ಜಾಹೀರಾತು ಪ್ರದರ್ಶಿಸುವುದಕ್ಕಾಗಿ ನೀಡುವ ಶುಲ್ಕವನ್ನು ಚೆಕ್ ಅಥವಾ ಡಿಡಿ ಮೂಲಕ ಮಾತ್ರ ನೀಡಲಾಗುವುದು ಎಂಬ ಹೇಳಿಕೆಯನ್ನು ಇದರೊಂದಿಗೆ ನೀಡಬೇಕು.

              ವಿದ್ಯುನ್ಮಾನ ಮಾಧ್ಯಮದಲ್ಲಿನ ರಾಜಕೀಯ ಜಾಹೀರಾತುಗಳು ಅಂಗೀಕಾರ ಲಭಿಸಿದವುದಲಾಗಿವೆಯೇ ಎಂದು ಎಂಸಿಎಂಸಿ ಸಮಿತಿ ಪರಿಶೀಲಿಸಲಿದೆ. ಮಾಧ್ಯಮಗಳಲ್ಲಿನ ಇತರ ಜಾಹೀರಾತುಗಳ ಪ್ರಸಾರಕ್ಕೆ ತಗಲುವ ಖರ್ಚಿನ ಆಧಾರದ ಮೇಲೆ ಚುನಾವಣಾ ಜಾಹೀರಾತುಗಳಿಗೆ ತಗಲುವ ವೆಚ್ಚವನ್ನು ಮೌಲ್ಯಮಾಪನ ಮಾಡಲಾಗುತ್ತದೆ.

               ವಿದ್ಯಾನಗರ ಸಿವಿಲ್ ಸ್ಟೇಷನ್ ನ ಜಿಲ್ಲಾ ಮಾಹಿತಿ ಮತ್ತು ವಾರ್ತಾ ಕಛೇರಿಯ ಪಿ ಆರ್ ಡಿ ಚೆಂಬರ್ ನಲ್ಲಿ ಕಾರ್ಯಾಚರಿಸುತ್ತಿರುವ ಎಂಸಿಎಂಸಿ ಸೆಲ್ ನಲ್ಲಿ ಅರ್ಜಿ ನಮೂನೆಗಳು ಲಭ್ಯವಿರಲಿದೆ ಎಂದು ಪರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries