ತಿರುವನಂತಪುರಂ: ಸ್ವಂತ ಮತ ಚಲಾಯಿಸಲಾಗದ ಅಭ್ಯರ್ಥಿಗಳು ಇಂದು ಕಣದಲಿದ್ದರು. ತಮ್ಮ ಸ್ವಂತ ಕ್ಷೇತ್ರದಿಂದ ಹೊರಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಬೂತ್‍ಗಳಿಗೆ ತೆರಳಿ ಮತ ಚಲಾಯಿಸಿ ನಂತರ ಸ್ಪರ್ಧಿಸಿದ ಕ್ಷೇತ್ರಗಳಿಗೆ ಮರಳಬೇಕಾಯಿತು. .
ತಿರುವನಂತಪುರಂ ಎನ್‍ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಬೆಂಗಳೂರಿನಲ್ಲಿ ಮತ ಚಲಾಯಿಸಿದರು. ವಯನಾಡಿನ ಯುಡಿಎಫ್ ಅಭ್ಯರ್ಥಿ ರಾಹುಲ್ ಗಾಂಧಿ ಮತ್ತು ಎಲ್ ಡಿಎಫ್ ಅಭ್ಯರ್ಥಿ ಅನ್ನಿ ರಾಜಾ ದೆಹಲಿಯಲ್ಲಿ ಮತ ಚಲಾಯಿಸಲಿದ್ದಾರೆ. ಮೂವರೂ ಮತ ಹಾಕಲು ಕೇರಳವನ್ನು ತೊರೆಯಬೇಕಾಗುತ್ತದೆ.
ವಯನಾಡಿನ ಎನ್‍ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಕೋಝಿಕ್ಕೋಡ್ ನಲ್ಲಿ ಮತ ಚಲಾಯಿಸಿದರು. ತಿರುವನಂತಪುರ ಎಲ್‍ಡಿಎಫ್ ಅಭ್ಯರ್ಥಿ ಪನ್ಯನ್ ರವೀಂದ್ರನ್ ಕಣ್ಣೂರು ಕಕ್ಕಾಡ್ ಸರ್ಕಾರಿ ಯುಪಿ ಶಾಲೆಯಲ್ಲಿ ಮತ ಚಲಾಯಿಸಿದರು. ಪತ್ತನಂತಿಟ್ಟ ಕ್ಷೇತ್ರದಲ್ಲಿ ಅಟ್ಟಿಂಗಲ್‍ನ ಯುಡಿಎಫ್ ಅಭ್ಯರ್ಥಿ ಅಡೂರ್ ಪ್ರಕಾಶ್ ಮತ ಚಲಾಯಿಸಿದರು.
ಕೊಟ್ಟಾಯಂ ಯುಡಿಎಫ್ ಅಭ್ಯರ್ಥಿ ಫ್ರಾನ್ಸಿಸ್ ಜಾರ್ಜ್ ಇಡುಕ್ಕಿ ಕ್ಷೇತ್ರದ ಮುವಾಟ್ಟುಪುಳದಲ್ಲಿ ಮತ್ತು ಎನ್‍ಡಿಎ ಅಭ್ಯರ್ಥಿ ತುಷಾರ್ ವೆಲ್ಲಪ್ಪಲ್ಲಿ ಆಲಪ್ಪುಳ ಕನಿಚ್‍ಕುಲಂಗರಾದಲ್ಲಿ ಮತ ಚಲಾಯಿಸಿದರು. ಕೊಲ್ಲಂ ಎನ್‍ಡಿಎ ಅಭ್ಯರ್ಥಿ ಜಿ. ಕೃಷ್ಣಕುಮಾರ್ ಅವರು ತಿರುವನಂತಪುರದಲ್ಲಿ ವರ್ಟಿಯೂರ್ ಕಾವ್ ನಲ್ಲಿ ಮತ ಚಚಲಾಯಿಸಿದರು. ತ್ರಿಶೂರ್ ಯುಡಿಎಫ್ ಅಭ್ಯರ್ಥಿ ಕೆ. ಮುರಳೀಧರನ್ ಕೂಡ ವಟ್ಟಿಯೂರ್ಕಾದಲ್ಲಿ ಮತ ಚಲಾಯಿಸಿದರು.
ಚಾಲಕುಡಿ ಎಲ್‍ಡಿಎಫ್ ಅಭ್ಯರ್ಥಿ ಸಿ. ರವೀಂದ್ರನಾಥ್, ಪಾಲಕ್ಕಾಡ್ ಅಭ್ಯರ್ಥಿ ಎ. ವಿಜಯರಾಘವನ್, ಎನ್‍ಡಿಎಯ ಇಡುಕ್ಕಿ ಅಭ್ಯರ್ಥಿ ಸಂಗೀತಾ ವಿಶ್ವನಾಥನ್ ಮತ್ತು ಪೆÇನ್ನಾನಿ ಅಭ್ಯರ್ಥಿ ನಿವೇದಿತಾ ಸುಬ್ರಮಣಿಯನ್ ತ್ರಿಶೂರ್‍ನಲ್ಲಿ ಮತ ಚಲಾಯಿಸಿದರು. ಪೊನ್ನಾನಿಯ ಎಲ್‍ಡಿಎಫ್ ಅಭ್ಯರ್ಥಿ ಕೆಎಸ್ ಹಂಝ ತ್ರಿಶೂರ್ ಪಂಜಾಲ್‍ನಲ್ಲಿ ಮತ ಚಲಾಯಿಸಿದರು. ಆಲತ್ತೂರಿನ ಎನ್‍ಡಿಎ ಟಿ.ಎನ್.ಸರಸು ಚಾಲಕುಡಿಯಲ್ಲಿ ಮತ್ತು ಆಲಪ್ಪುಳದ ಎನ್‍ಡಿಎ ಅಭ್ಯರ್ಥಿ ಶೋಭಾ ಸುರೇಂದ್ರನ್ ಆಲತ್ತೂರಿನಲ್ಲಿ ಮತಚಲಾಯಿಸಿದರು.
ಮಾವೇಲಿಕರ ಎಲ್‍ಡಿಎಫ್ ಅಭ್ಯರ್ಥಿ ಸಿಎ ಅರುಣ್‍ಕುಮಾರ್ ಆಲಪ್ಪುಳದಲ್ಲಿ ಮತ ಚಲಾಯಿಸಿದರು. Àುಲಪ್ಪುರಂ ಕ್ಷೇತ್ರದ ಎಲ್‍ಡಿಎಫ್ ಅಭ್ಯರ್ಥಿ ವಿ. ವಾಸಿಫ್ ಕೋಝಿಕ್ಕೋಡ್ ನಲ್ಲೂ ಎನ್‍ಡಿಎ ಅಭ್ಯರ್ಥಿ ಡಾ. ಎಂ.ಅಬ್ದುಲ್ ಸಲಾಂ ತಿರುವನಂತಪುರದಲ್ಲಿ ಮತ ಚಲಾಯಿಸಿದರು.