ಕೊಲಂಬೊ: 'ಕಚ್ಚತೀವು ದ್ವೀಪವನ್ನು 'ಮರು ವಶ' ಪಡೆಯುವ ಬಗ್ಗೆ ಭಾರತದಿಂದ ಕೇಳಿ ಬರುತ್ತಿರುವ ಹೇಳಿಕೆಗಳಿಗೆ ಯಾವುದೇ ಆಧಾರವಿಲ್ಲ' ಎಂದು ಶ್ರೀಲಂಕಾದ ಮೀನುಗಾರಿಕೆ ಸಚಿವ ಡೌಗ್ಲಸ್ ದೇವಾನಂದ ಅವರು ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.
ಕೊಲಂಬೊ: 'ಕಚ್ಚತೀವು ದ್ವೀಪವನ್ನು 'ಮರು ವಶ' ಪಡೆಯುವ ಬಗ್ಗೆ ಭಾರತದಿಂದ ಕೇಳಿ ಬರುತ್ತಿರುವ ಹೇಳಿಕೆಗಳಿಗೆ ಯಾವುದೇ ಆಧಾರವಿಲ್ಲ' ಎಂದು ಶ್ರೀಲಂಕಾದ ಮೀನುಗಾರಿಕೆ ಸಚಿವ ಡೌಗ್ಲಸ್ ದೇವಾನಂದ ಅವರು ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.
ಕಚ್ಚತೀವು ದ್ವೀಪವನ್ನು ನೆಪವಾಗಿಸಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು, ಕಾಂಗ್ರೆಸ್ ಮತ್ತು ತಮಿಳುನಾಡಿನ ಡಿಎಂಕೆ ಪಕ್ಷಗಳ ಮೇಲೆ ನಡೆಸುತ್ತಿರುವ ವಾಗ್ದಾಳಿ ಹಿನ್ನೆಲೆಯಲ್ಲಿ ಹೀಗೆ ಹೇಳಿದ್ದಾರೆ.
'ಭಾರತದಲ್ಲಿ ಈಗ ಸಾರ್ವತ್ರಿಕ ಚುನಾವಣೆಯ ಸಮಯ. ಕಚ್ಚತೀವು ವಶಕ್ಕೆ ಪಡೆಯುವ ಕುರಿತು ಹೇಳಿಕೆ, ಪ್ರತಿ ಹೇಳಿಕೆಗಳು ಸಾಮಾನ್ಯ' ಎಂದು ಸುದ್ದಿಗಾರರಿಗೆ ಹೇಳಿದರು.
'ಬಹುಶಃ, ಶ್ರೀಲಂಕಾವು ಈ ಸಂಪನ್ಮೂಲಭರಿತ ದ್ವೀಪದ ಮೇಲೆ ಹಕ್ಕು ಪ್ರತಿಪಾದಿಸಬಾರದು. ಆ ದೇಶದ ಮೀನುಗಾರರು ಈ ದ್ವೀಪ ಭಾಗದಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗದಂತೆ ತನ್ನ ಹಕ್ಕು ಸ್ಥಾಪಿಸಲು ಭಾರತ ಈಗ ಯತ್ನಿಸುತ್ತಿರಬಹುದು' ಎಂದು ಸಚಿವರು ಅಭಿಪ್ರಾಯಪಟ್ಟರು.
'1974ರ ಒಪ್ಪಂದದ ಅನುಸಾರ ಎರಡೂ ರಾಷ್ಟ್ರಗಳ ಮೀನುಗಾರರೂ ಈ ದ್ವೀಪ ಭಾಗದಲ್ಲಿ ಮೀನುಗಾರಿಕೆಯನ್ನು ನಡೆಸಬಹುದು. ಆದರೆ, ಬಳಿಕ 1976ರಲ್ಲಿ ಈ ಒಪ್ಪಂದವನ್ನು ಪರಿಷ್ಕರಿಸಲಾಗಿದ್ದು, ತಿದ್ದುಪಡಿ ಮಾಡಲಾಗಿದೆ' ಎಂದು ಅವರು ತಿಳಿಸಿದರು.