ಕಾಸರಗೋಡು: ಕೇರಳದ ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸದಸ್ಯರಾಗಿರುವ ಕಾರ್ಮಿಕರು ಮಾಸಿಕ ನೂರು ರೂ. ಪಾವತಿಸುತ್ತಿದ್ದರೆ, ತಿಂಗಳಿಗೆ 50 ರೂ.ಗಳನ್ನು ಪಾವತಿಸುತ್ತಿದ್ದರೆ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಇದರ ಅರ್ಧ ಮೊತ್ತವನ್ನು ನೀಡದಿರುವುದು ಕಾರ್ಮಿಕ ವಂಚನೆಯಾಗಿದೆ ಎಂದು ಕೇರಳ ಪ್ರದೇಶ ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎನ್.ವಿಜಯನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾ ಅಸಂಘಟಿತ ಕಾರ್ಮಿಕರ ಸಂಘ ಬಿಎಂಎಸ್ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಈ ವಿಭಾಗದ ಕಾರ್ಮಿಕರನ್ನು ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ತರಲು ಆಡಳಿತ ಮಂಡಳಿ ಮತ್ತು ಸರ್ಕಾರ ಮುಂದಗಬೇಕು. ಬಿಎಂಎಸ್ ಜಿಲ್ಲಾ ಜತೆಕಾರ್ಯದರ್ಶಿ ಸುನಿಲ್ ಕುಮಾರ್ ಮುಖ್ಯ ಭಾಷಣ ಮಾಡಿದರು. ಲತಾದಾಮೋದರನ್ ಕೊಟ್ಟೋಡಿ ವರದಿ, ಕೋಶಾಧಿಕಾರಿ ಅವಿನಾಶ್ ಕೂಡ್ಲು ಲೆಕ್ಕಪತ್ರ, ಕೆ. ಬಾಬು ಮೋನ್ ಠರಾವು ಮಂಡಿಸಿದರು. ಸಂತೋಷ್ ಕಿನಾನೂರು, ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್ ನೇತೃತ್ವದಲ್ಲಿ ಸಂಘಟನೆ ಚರ್ಚೆ ಪದಾಧಿಕಾರಿಗಳ ಚುನಾವಣೆ ನಡೆಯಿತು. ಬಿಎಂಎಸ್ ಜಿಲ್ಲಾ ಜತೆಕಾರ್ಯದರ್ಶಿ ಪ್ರದೀಪ್ ಕೋಳೋತ್ ಚಚೆ ನಿರ್ವಹಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಪದಾಧಿಕಾರಿಗಳಾದ ಸುರೇಶ್ ದೇಳಿ, ಕೃಷ್ಣನ್ ಟಿ ಉಪಸ್ಥಿತರಿದ್ದರು. ಸಂಘಟನೆ ನೂತನ ಅಧ್ಯಕ್ಷರಾಗಿ ಎಂ.ಕೆ. ರಾಘವನ್, ಉಪಾಧ್ಯಕ್ಷರಾಗಿ ರವಿ ಕೋಳಿಯೂರು, ಲತಾ ದಾಮೋದರನ್ ಕೊಟ್ಟೋಡಿ,. ಶಿವನ್ ಪುದಿಯಕಂಡಂ, ಅಪೆÇೀಜಿ ಮುಳ್ಳೇರಿಯಾ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎ.ಶ್ರೀನಿವಾಸನ್, ಜತೆಕಾರ್ಯದರ್ಶಿಗಳಾಗಿ ಅನೀಶ್ ಪರಕ್ಲಾಯಿ, ಸಂತೋಷ್ ಪುದುಕುನ್ನು, ತಾರಾನಾಥ್ ನೀರ್ಚಾಲ್, ಮನೋಜ್ ಜೆಪಿ ನಗರ, ದಾಸ್ ಕರಣ್ ಪೆÇಯಿನಾಚಿ, ಕೋಶಾಧಿಕಾರಿ ಅವಿನಾಶ್ ಕೆ. ಕೂಡ್ಲು ಆಯ್ಕೆಯಾದರು. ಕೆ.ಎ.ಶ್ರೀನಿವಾಸನ್ ಸ್ವಾಗತಿಸಿದರು. ಭಾಸ್ಕರನ್ ಪೆÇಯಿನಾಚಿ ವಂದಿಸಿದರು.