ಇಳುವರಿ ಮತ್ತು ಕೀಟಗಳಿಂದ ರಕ್ಷಣೆ ಪಡೆಯುವ ದೃಷ್ಟಿಯಿಂದ ಈಗಂತೂ ಎಲ್ಲಾ ಬೆಳೆಗಳಿಗೆ ರಾಸಾಯನಿಕ ಸಿಂಪಡನೆ ಇದ್ದಿದ್ದೆ. ಹಾಗಾಗಿ ಯಾವುದೇ ಹಣ್ಣು, ತರಕಾರಿಗಳನ್ನು (Fruits, Vegetables) ಸೇವಿಸುವ ಮುನ್ನ ಚೆನ್ನಾಗಿ ಕೆಲ ಕ್ರಮಗಳನ್ನು ಅನುಸರಿಸುವ ಮೂಲಕ ತೊಳೆಯಲೇಬೇಕು.
ದ್ರಾಕ್ಷಿ ಕ್ಲೀನ್ ಮಾಡುವ ವಿಧಾನ ವೈರಲ್
ಸೀಸನ್ ಫ್ರೂಟ್ ಆಗಿರುವ ದ್ರಾಕ್ಷಿ ಕೂಡ ಇದಕ್ಕೆ ಹೊರತೇನಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ದ್ರಾಕ್ಷಿಯ ಶುಚಿತ್ವದ ಬಗ್ಗೆ ಹಲವು ರೀಲ್ಸ್‌ಗಳು ವೈರಲ್ ಆಗುತ್ತಿವೆ. ವೈರಲ್ ವಿಡಿಯೋಗಳು ದ್ರಾಕ್ಷಿಗೆ ಹೆಚ್ಚು ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ, ಅವುಗಳನ್ನು ಉತ್ತಮ ರೀತಿಯಲ್ಲಿ ತೊಳೆದು ತಿನ್ನಬೇಕು, ಮಕ್ಕಳಿಗೆ ಈ ಹಣ್ಣನ್ನು ಕೊಡದೇ ಇರೋದೆ ಉತ್ತಮ ಎನ್ನುತ್ತಿವೆ.
ಇನ್‌ಸ್ಟಾದಲ್ಲಿ ಹಲವಾರು ವಿಡಿಯೋಗಳು ಸಂಪೂರ್ಣ ಶುಚಿಗೊಳಿಸುವ ಪ್ರಕ್ರಿಯೆಯನ್ನು ಅನುಸರಿಸದ ಹೊರತು ದ್ರಾಕ್ಷಿಯು ಬಳಕೆಗೆ ಅನರ್ಹವಾಗಿವೆ ಮತ್ತು ಹಲವಾರು ರಾಸಾಯನಿಕಗಳನ್ನು ಅವುಗಳ ಮೇಲೆ ಹೇಗೆ ಸಿಂಪಡಿಸಲಾಗುತ್ತದೆ ಎಂಬುದನ್ನು ತೋರಿಸುತ್ತಿವೆ. ವೈರಲ್ ವಿಡಿಯೋಗಳು ದ್ರಾಕ್ಷಿಯನ್ನು ಸ್ವಚ್ಛಗೊಳಿಸಲು ಅಡಿಗೆ ಸೋಡಾ ಮತ್ತು ಉಪ್ಪನ್ನು ಬೆಚ್ಚಗಿನ ನೀರಿಗೆ ಸೇರಿಸಿ ತೊಳೆಯಲು ಮತ್ತು ಹಣ್ಣನ್ನು ಸೇವಿಸುವ ಮುನ್ನಐದರಿಂದ ಹತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಲು ಹೇಳುತ್ತಿವೆ.
ಮಕ್ಕಳ ತಜ್ಞ, ಶಿಶುವೈದ್ಯ ನಿಯೋನಾಟಾಲಜಿಸ್ಟ್ ಡಾ ರಾಹುಲ್ ಅಡ್ಸುಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸ್ಟ್ರಾಬೆರಿ ಮತ್ತು ದ್ರಾಕ್ಷಿಗಳೆರಡೂ ವಯಸ್ಕರು ಮತ್ತು ಮಕ್ಕಳಲ್ಲಿ ಗಂಟಲಿನ ಸೋಂಕನ್ನು ಉಂಟುಮಾಡುತ್ತಿವೆ. ದ್ರಾಕ್ಷಿಯಲ್ಲಿ ಗರಿಷ್ಠ ಪ್ರಮಾಣದ ಕೀಟನಾಶಕಗಳಿವೆ, ಮತ್ತು ಈ ವಿಷಕಾರಿ ರಾಸಾಯನಿಕಗಳು ಎಲ್ಲಾ ಗಂಟಲಿನ ಸಮಸ್ಯೆಗಳಿಗೆ ಕಾರಣವಾಗಿವೆ.ಹೀಗಾಗಿ ಹಣ್ಣುಗಳನ್ನು ಸ್ವಚ್ಛಗೊಳಿಸಲು ಕೆಲವು ಹಂತಗಳನ್ನು ಅನುಸರಿಸಬೇಕು ಎಂದು ಎಚ್ಚರಿಸಿದ್ದಾರೆ.
ದ್ರಾಕ್ಷಿ ನಿಜವಾಗಿಯೂ ಹಾನಿಕಾರಕವೇ?
ಸಾಮಾಜಿಕ ಮಾಧ್ಯಮದಲ್ಲಿ ಬರುವ ಎಲ್ಲವನ್ನೂ ನಂಬಲು ಅಸಾಧ್ಯ. ಇದಕ್ಕೆ ವೈದ್ಯರು ಮತ್ತು ಪೌಷ್ಟಿಕತಜ್ಞರ ಅಭಿಪ್ರಾಯ ಮುಖ್ಯವಾಗುತ್ತದೆ.
ದ್ರಾಕ್ಷಿ
ಈ ಬಗ್ಗೆ ಮಾತನಾಡಿದ ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ, ಡಾ ಮೀನಾಕ್ಷಿ ಜೈನ್, "ಈ ಋತುವಿನಲ್ಲಿ, ನಾವು ಸೇವಿಸುವ ದ್ರಾಕ್ಷಿಯ ಸುರಕ್ಷತೆಯ ಬಗ್ಗೆ ಕಾಳಜಿಗಳು ಹುಟ್ಟಿಕೊಂಡಿವೆ, ಮುಖ್ಯವಾಗಿ ಅವುಗಳ ಕೃಷಿಯಲ್ಲಿ ಭಾರೀ ಕೀಟನಾಶಕಗಳ ಬಳಕೆಯಿಂದಾಗಿ. ಕೀಟನಾಶಕಗಳು, ಬೆಳೆಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದ್ದರೂ, ಇವು ಆರೋಗ್ಯದ ಅಪಾಯಗಳನ್ನು ಉಂಟುಮಾಡಬಹುದು. ಹೆಚ್ಚಿನ ಕೀಟನಾಶಕ ಹೊಂದಿರುವ ದ್ರಾಕ್ಷಿಯನ್ನು ಸೇವಿಸುವುದರಿಂದ ನರಮಂಡಲಕ್ಕೆ ಹಾನಿ, ಹಾರ್ಮೋನ್ ಕ್ರಿಯೆಯ ಅಡ್ಡಿ ಮತ್ತು ಕ್ಯಾನ್ಸರ್ ಅಪಾಯ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು" ಎಂದಿದ್ದಾರೆ.
ದ್ರಾಕ್ಷಿಯನ್ನು ಉಪ್ಪು ಮತ್ತು ಅಡಿಗೆ ಸೋಡಾದಲ್ಲಿ ತೊಳೆಯುವುದು ಉತ್ತಮ ಪರಿಹಾರವೇ?
ಹಲವಾರು ಇನ್‌ಸ್ಟಾಗ್ರಾಮ್ ರೀಲ್‌ಗಳು ದ್ರಾಕ್ಷಿಯನ್ನು ಉಪ್ಪು ಮತ್ತು ಅಡಿಗೆ ಸೋಡಾದೊಂದಿಗೆ ಬೆರೆಸಿದ ಬೆಚ್ಚಗಿನ ನೀರಿನಲ್ಲಿ ತೊಳೆಯುವ ವಿಧಾನವನ್ನು ಹೇಳಿವೆ. ಆದಾಗ್ಯೂ, ಮೇಲೆ ತಿಳಿಸಿದ ಪದಾರ್ಥಗಳೊಂದಿಗೆ ಬೆಚ್ಚಗಿನ ನೀರಿನಲ್ಲಿ ದ್ರಾಕ್ಷಿಯನ್ನು ನೆನೆಸುವುದು ಸಾಕಾಗುವುದಿಲ್ಲ ಎನ್ನುತ್ತಾರೆ ತಜ್ಞರು.
"ಇದು ಶುಚಿಗೊಳಿಸುವ ಪ್ರಕ್ರಿಯೆಯ ಭಾಗವಾಗಿದ್ದರೂ, ಸಂಪೂರ್ಣವಾಗಿ ತೊಳೆಯುವುದು ಮಾತ್ರ ಕೀಟನಾಶಕಗಳ ಅವಶೇಷಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ" ಎಂದಿದ್ದಾರೆ ವೈದ್ಯೆ ಮೀನಾಕ್ಷಿ. ಸಿಪ್ಪೆಸುಲಿಯುವುದು, ನೆನೆಸುವುದು ಮತ್ತು ಬ್ಲಾಂಚಿಂಗ್ (ತರಕಾರಿಗಳಿಗೆ) ಈ ವಿಧಾನಗಳು ಕೀಟನಾಶಕಗಳ ಅವಶೇಷಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು ಎಂದಿದ್ದಾರೆ.
ದ್ರಾಕ್ಷಿಯನ್ನು ತೊಳೆಯಲು ಸರಿಯಾದ ಮಾರ್ಗ
"2 ಪ್ರತಿಶತದಷ್ಟು ಉಪ್ಪು ನೀರಿನಿಂದ ತೊಳೆಯುವುದು ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈಯಲ್ಲಿ ಸಾಮಾನ್ಯವಾಗಿ ಕಂಡುಬರುವ ಹೆಚ್ಚಿನ ಕೀಟನಾಶಕ ಅವಶೇಷಗಳನ್ನು ತೆಗೆದುಹಾಕುತ್ತದೆ. ಉತ್ತಮ ಪರಿಣಾಮಕ್ಕಾಗಿ, ದ್ರಾಕ್ಷಿ, ಸೇಬು, ಪೇರಳೆ, ಪ್ಲಮ್, ಮಾವಿನಹಣ್ಣು, ಪೀಚ್ ಮತ್ತು ಪೇರಳೆಗಳಂತಹ ಹಣ್ಣುಗಳನ್ನು ಕನಿಷ್ಠ 2-3 ಬಾರಿ ತೊಳೆಯಲು ಸೂಚಿಸಲಾಗುತ್ತದೆ.
ಕೊಳಕು ಮತ್ತು ರಾಸಾಯನಿಕ ಅವಶೇಷಗಳನ್ನು ತೆಗೆದುಹಾಕಲು ಮೂರು ಪರಿಣಾಮಕಾರಿ ಹಂತಗಳು
- ಹರಿಯುವ ನೀರಿನ ಅಡಿಯಲ್ಲಿ ತೊಳೆಯುವುದು: ಇದು ಕೊಳಕು ಮತ್ತು ಕೆಲವು ಮೇಲ್ಮೈ ಕೀಟನಾಶಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
- ವಿನೆಗರ್ ದ್ರಾವಣದಲ್ಲಿ ನೆನೆಸಿ: ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ (1: 3 ಅನುಪಾತ) ಮತ್ತು ದ್ರಾಕ್ಷಿಯನ್ನು ಸುಮಾರು 5-10 ನಿಮಿಷಗಳ ಕಾಲ ನೆನೆಸುವುದು ಕೀಟನಾಶಕಗಳನ್ನು ತೆಗೆಯಲು ಸಹಾಯ ಮಾಡುತ್ತದೆ.
- ಮತ್ತೆ ತೊಳೆಯಿರಿ: ನೆನೆಸಿದ ನಂತರ, ದ್ರಾಕ್ಷಿಯನ್ನು ಹರಿಯುವ ನೀರಿನಲ್ಲಿ ತೊಳೆಯುವುದು ಮತ್ತೊಂದು ಉತ್ತಮ ವಿಧಾನ.