ನವದೆಹಲಿ: ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇರುವುದರಿಂದ ದೇಶದಾದ್ಯಂತ ರೈಲುಗಳು 9,111 ಬಾರಿ ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಶುಕ್ರವಾರ ತಿಳಿಸಿದೆ.
ನವದೆಹಲಿ: ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇರುವುದರಿಂದ ದೇಶದಾದ್ಯಂತ ರೈಲುಗಳು 9,111 ಬಾರಿ ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಶುಕ್ರವಾರ ತಿಳಿಸಿದೆ.
2023ಕ್ಕೆ ಹೋಲಿಸಿದರೆ ಇದು ಗಣನೀಯ ಹೆಚ್ಚಳ. ಆ ವರ್ಷ ಬೇಸಿಗೆ ಅವಧಿಯಲ್ಲಿ ರೈಲುಗಳು ಹೆಚ್ಚುವರಿಯಾಗಿ 6,369 ಬಾರಿ ಸಂಚರಿಸಿದ್ದವು.
ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತದೆ. ಹೆಚ್ಚುವರಿ ರೈಲುಗಳು ಈ ಭಾಗಗಳಲ್ಲಿ ಸಂಚರಿಸಲಿವೆ.
ಮಾಧ್ಯಮ ವರದಿಗಳು, ಸಾಮಾಜಿಕ ಜಾಲತಾಣಗಳು, ರೈಲ್ವೆ ಸಹಾಯವಾಣಿ ಆಧರಿಸಿ ಹೆಚ್ಚುವರಿ ರೈಲು ಅಥವಾ ರೈಲುಗಳ ಹೆಚ್ಚುವರಿ ಸಂಚಾರ ಸೇವೆಯನ್ನು ಒದಗಿಸಲಾಗುವುದು ಎಂದು ತಿಳಿಸಿದೆ.