ಕಾಸರಗೋಡು : ನಗರದ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಬಿ. ಶಿವಕುಮಾರ್ ಕೋಲಾರ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್ ಕೋಲಾರ ಜಂಟಿಯಾಗಿ ನಡೆಸಲಿರುವ "ಕೇರಳ -ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕøತಿಕ ಉತ್ಸವ 2024 ಏಪ್ರಿಲ್ 11ರಂದು ಮಧ್ಯಾಹ್ನ 2ಗಂಟೆಗೆ ಕನ್ನಡ ಭವನದಲ್ಲಿ ಜರುಗಲಿದೆ.
ಈ ಸಂದರ್ಭ ಉದ್ಘಾಟನೆ, ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ, ಅಂತಾರಾಜ್ಯ ಕವಿಗೋಷ್ಠಿ, ವಸಂತ ಬಾರಡ್ಕ ಸಾರತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸ್ವರ್ಣಭೂಮಿ ಫೌಂಡೇಶನ್ ಕೋಲಾರದ ಪ್ರತಿಷ್ಠಿತ ಪ್ರಶಸ್ತಿ "ಶತ ಶೃಂಗ ಪ್ರಶಸ್ತಿಯನ್ನು ವಿ ಬಿ ಕುಳಮರ್ವ, ಡಾ ಕೊಲಚಪ್ಪೆ ಗೋವಿಂದ ಭಟ್, ವೆಂಕಟ್ ಭಟ್ ಎಡನೀರು, ಪತ್ರಕರ್ತ ಪ್ರದೀಪ್ ಬೇಕಲ್, ಡಾ ಅನುರಾಧ ಕುರುಂಜಿ ಸುಳ್ಯ, ಸೀತಾಲಕ್ಷ್ಮಿ ವರ್ಮ, ಇವರಿಗೆ ಪ್ರದನ ಮಾಡಲಾಗುವುದು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಅಧ್ಯಕ್ಷ ರವಿ ನಾಯ್ಕಾಪು ಸಮಾರಂಭದ ಅಧ್ಯಕ್ಷತೆ ವಹಿಸುವರು. ಡಾ ಶರಣಪ್ಪ ಕೋಲಾರ ಭುವನೇಶ್ವರಿ ಬಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವರು. ವಿ ಬಿ ಕುಳಮರ್ವ, ಎ ಆರ್ ಸುಬ್ಬಯ್ಯ ಕಟ್ಟೆ, ಡಾ ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ, ರಾಧಾಕೃಷ್ಣ ಕೆ ಉಳಿಯತ್ತಡ್ಕ, ಪೆÇ್ರ ಎ ಶ್ರೀನಾಥ್, ವಿಶಾಲಾಕ್ಷ ಪುತ್ರಕಳ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. ಕನ್ನಡ ಭವನ ಅಧ್ಯಕ್ಷ ವಾಮನ್ ರಾವ್ ಬೇಕಲ್, ಸ್ವರ್ಣಭೂಮಿ ಫೌಂಡೇಶನ್ ಅಧ್ಯಕ್ಷರಾದ ಬಿ ಶಿವಕುಮಾರ್ ಉಪಸ್ಥಿತರಿರುವರು.