ತಿರುವನಂತಪುರಂ: ಲೋಕಸಭೆ ಚುನಾವಣೆಯ ಮತದಾನದ ದಿನವಾದ ಏಪ್ರಿಲ್ 26 ರಂದು ನೆಗೋಷಿಯೇಬಲ್ ಇನ್‍ಸ್ಟ್ರುಮೆಂಟ್ಸ್ ಆಕ್ಟ್ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಇದು ವಾಣಿಜ್ಯ ಸಂಸ್ಥೆಗಳಿಗೆ ವೇತನದೊಂದಿಗೆ ರಜಾದಿನವಾಗಿದೆ. ರಜೆಯಂದು ವೇತನವನ್ನು ನಿರಾಕರಿಸುವಂತಿಲ್ಲ ಅಥವಾ ಕಡಮೆ ಮಾಡಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.
ಈ ನಡುವೆ ರಾಜ್ಯದಲ್ಲಿ ಚುನಾವಣಾ ತಯಾರಿ ಅಂತಿಮ ಹಂತದಲ್ಲಿದೆ. ನಕಲಿ ಮತದಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.