ಕೇಂದ್ರ, ಉತ್ತರ ಬಯಲು ಪ್ರದೇಶಗಳು ಹಾಗೂ ದಕ್ಷಿಣ ಭಾರತದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ದೀರ್ಘಾವಧಿ ಸಂಖ್ಯೆಯ ಬಿಸಿ ಗಾಳಿ ದಿನಗಳು ಇರಲಿವೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.
ಕೇಂದ್ರ, ಉತ್ತರ ಬಯಲು ಪ್ರದೇಶಗಳು ಹಾಗೂ ದಕ್ಷಿಣ ಭಾರತದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ದೀರ್ಘಾವಧಿ ಸಂಖ್ಯೆಯ ಬಿಸಿ ಗಾಳಿ ದಿನಗಳು ಇರಲಿವೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.
ಎಪ್ರಿಲ್ ಮತ್ತು ಜೂನ್ ನಡುವಿನ ಗರಿಷ್ಠ ತಾಪಮಾನವು ಸಾಧಾರಣ ಮಟ್ಟಕ್ಕಿಂತ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.
ಇಂದು ನಡೆದ ವರ್ಚುಯಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಕೇಂದ್ರ ಭಾರತ, ಉತ್ತರದ ಬಯಲು ಪ್ರದೇಶಗಳು ಹಾಗೂ ದಕ್ಷಿಣ ಭಾರತದಲ್ಲಿ ಎರಡರಿಂದ ಎಂಟು ದಿನಗಳ ಕಾಲ ಬಿಸಿ ಗಾಳಿಯನ್ನು ನಿರೀಕ್ಷಿಸಲಾಗಿದೆ. ಈ ಬಿಸಿ ಗಾಳಿಯು ಗುಜರಾತ್, ಮಹಾರಾಷ್ಟ್ರ, ಉತ್ತರ ಕರ್ನಾಟಕ, ಒಡಿಶಾ, ಆಂಧ್ರಯಪ್ರದೇಶ ಹಾಗೂ ಪಶ್ಚಿಮ ಮಧ್ಯ ಪ್ರದೇಶದಲ್ಲಿ ಬೀಸಲಿದೆ" ಎಂದು ಹೇಳಿದ್ದಾರೆ.
ಬಿಸಿ ಗಾಳಿಯ ಸ್ಥಿತಿಯನ್ನು ಎದುರಿಸಲು 23 ರಾಜ್ಯಗಳು ಸನ್ನದ್ಧ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕೇಂದ್ರ ಭಾರತ ಹಾಗೂ ಪಶ್ಚಿಮ ಕರಾವಳಿ ಭಾರತದಲ್ಲಿ ಸಾಧಾರಣ ಮಟ್ಟಕ್ಕಿಂತ ಹೆಚ್ಚಿನ ತಾಪಮಾನವು ಮುಂದುವರಿಯುವ ಸಾಧ್ಯಪತೆ ಇದೆ ಎಂದು ಹೇಳಲಾಗಿದೆ.
ಬಿಸಿ ಗಾಳಿಯಿಂದ ಬಡವರ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಅಭಿಪ್ರಾಯ ಪಟ್ಟಿದೆ.