ಕಾಸರಗೋಡು: ಜಿಲ್ಲೆಯಲ್ಲಿ ರಾಷ್ಟ್ರೀಯ ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಶಿಯನ್ (ಇಎಂಟಿ) ದಿನವನ್ನು ಆಚರಿಸಲಾಯಿತು. 108 ಆ್ಯಂಬುಲೆನ್ಸ್ ಸರ್ವೀಸ್‍ನಲ್ಲಿ ಕೆಲಸ ನಿರ್ವಹಿಸುವ ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಶಿಯನ್‍ಗಳ ನಿರ್ವಹಣೆಯನ್ನು ಗೌರವಿಸಿ ಜಿಲ್ಲೆಯಲ್ಲಿ ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಶಿಯನ್ ದಿನವನ್ನು ಆಚರಿಸಲಾಯಿತು.
108 ಆ್ಯಂಬುಲೆನ್ಸ್ ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಶಿಯನ್‍ಗಳೊಂದಿಗೆ ಕೇಕ್ ಕತ್ತರಿಸಿ ಡೆಪ್ಯೂಟಿ ಜಿಲ್ಲಾ ಮೆಡಿಕಲ್ ಆಫೀಸರ್ ಡಾ|ಗೀತಾ ಗುರುದಾಸ್ ದಿನವನ್ನು ಉದ್ಘಾಟಿಸಿದರು. ಜಿಲ್ಲಾ ಸಂಯೋಜಕ ಜೀಯೋ ಜೋಸ್, ಇ.ಎಂ.ಟಿ. ಗಳಾದ ಶೆಫೀನ್, ರೀನಾ ಮೋಲ್, ಅನೀಶ್ ಪಿ.ಕೆ, ಅರುಣ್ ಚಾಕೋ ಮೊದಲಾದವರು ಉಪಸ್ಥಿತರಿದ್ದರು.
ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ವೈದ್ಯಕೀಯ ನೆರವು ತಲುಪಿಸುವಲ್ಲಿ ಹಾಗು ಜೀವ ರಕ್ಷಣೆಯಲ್ಲಿ ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಶಿಯನ್‍ಗಳು ನಡೆಸುವ ಸೇವೆಯನ್ನು ಗುರುತಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿವಿಧ ಯೋಜನೆಗಳಲ್ಲಾಗಿ 23,000 ಮಂದಿ ಹಾಗು ರಾಜ್ಯದಲ್ಲಿ 541 ಮಂದಿ ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಶಿಯನ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಇಎಂಆರ್‍ಐ ಗ್ರೀನ್ ಹೆಲ್ತ್ ಸರ್ವೀಸಸ್ ರಾಜ್ಯ ಆಪರೇಶನ್ಸ್ ವರಿಷ್ಠ ಶರವಣನ್ ಅರುಣಾಚಲಂ ಹೇಳಿದರು.