ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಜರಗಿತು. ಕಲಾವಿದ, ಸಾಹಿತಿ, ಅಧ್ಯಾಪಕ ವಸಂತಭಟ್ ತೊಟ್ಟೆತ್ತೋಡಿ ಉದ್ಘಾಟಿಸಿದರು. ಮಕ್ಕಳಿಗೆ ತಾನೇ ರಚಿಸಿದ ಹಾಡನ್ನು ಹಾಡಿ ಮನರಂಜಿಸಿದರು.
ಶಾಲಾ ಪ್ರಬಂಧಕ ಡಾ. ಜಯಪ್ರಕಾಶ ನಾರಾಯಣ ಶುಭ ಹಾರೈಸಿದರು. ನಿವೃತ್ತ ಅಧ್ಯಾಪಿಕೆ ಜಯಲಕ್ಷ್ಮೀ ಟೀಚರ್, ಮಾತೃ ಸಂಘದ ಅಧ್ಯಕ್ಷೆ ಭವ್ಯ ಹಾಗೂ ಪ್ರಿ-ಪ್ರೈಮರಿ ಮಾತೃ ಸಂಘದ ಅಧ್ಯಕ್ಷೆ ಸುಮಿತ್ರ ಉಪಸ್ಥಿತರಿದ್ದರು. ಜಯಲಕ್ಷ್ಮೀ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಎಸ್. ರಾವ್ ಸ್ವಾಗತಿಸಿ, ದೀಕ್ಷಾ ಕೆ ವಂದಿಸಿದರು.