ಕೋಝಿಕ್ಕೋಡ್: ಲಕ್ಷಾಂತರ ಭಕ್ತರ ಮನ ಗೆದ್ದಿರುವ ತ್ರಿಶೂರ್ ಪೂರಂ ಅವ್ಯವಸ್ಥೆಗೊಳಿಸುವುದರ ಹಿಂದೆ ಪೆÇಲೀಸರನ್ನು ಬಳಸಿಕೊಂಡು ಸರ್ಕಾರ ನಡೆಸಿದ ಷಡ್ಯಂತ್ರ ಎಂದು ಕೇರಳ ಧರ್ಮಾಚಾರ್ಯ ಸಭಾದ ರಾಜ್ಯಾಧ್ಯಕ್ಷ ಸ್ವಾಮಿ ಚಿದಾನಂದ ಪುರಿ ಮತ್ತು ಪ್ರಧಾನ ಕಾರ್ಯದರ್ಶಿ ಮುಲ್ಲಪಲ್ಲಿ ಕೃಷ್ಣನ್ ನಂಬೂದಿರಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೂರಂನ ಅಂಗಣ ಹಾಗೂ ಮಠಕ್ಕೆ ಪೋಲೀಸರು ಪ್ರವೇಶ ನಿರ್ಬಂಧಿಸಿದ್ದು ಮತ್ತು ನಡುವಿಲಾಲ್ ಬಳಿ ಭಕ್ತರನ್ನು ಥಳಿಸಿರುವುದು ಸಂಪೂರ್ಣವಾಗಿ ಪೂರ್ವಯೋಜಿತವಾಗಿದೆ.
ಇತಿಹಾಸದಲ್ಲಿ ಮೊದಲ ಬಾರಿಗೆ ತ್ರಿಶೂರ್ ಪೂರಂ ನಿಲ್ಲಿಸಬೇಕಾಯಿತು. ಹಿಂಸಾಚಾರ ಮತ್ತು ದಂಗೆಯ ದಮನದ ಹೆಸರಲ್ಲಿ ಪೋಲೀಸ್ ಅಧಿಕಾರಿಗಳನ್ನು ಬಳಸಿ ಸರ್ಕಾರದ ರಹಸ್ಯ ತಂತ್ರವನ್ನು ಭಕ್ತರು ಗುರುತಿಸಬೇಕು. ಸನಾತನ ಧರ್ಮದ ನಿರ್ಮೂಲನೆಯನ್ನು ಗುರಿಯಾಗಿಸಿ ಹಿಂದೂ ದೇವರುಗಳನ್ನು ‘ಪುರಾಣ’(ಮಿಥ್) ಎಂದು ಅವಮಾನಿಸಿ ದೇವಾಲಯಗಳನ್ನು ನಾಶಪಡಿಸಿದ ರಾಜಕಾರಣಿಗಳು ಇದಕ್ಕೆ ಕಾರಣರಾಗಿದ್ದಾರೆ. ಇದೂ ಕೂಡ ಆಚರಣೆಯನ್ನು ಮೊಟಕುಗೊಳಿಸಿ ಶಬರಿಮಲೆಯನ್ನು ನಾಶ ಮಾಡುವ ಪ್ರಯತ್ನದ ಮುಂದುವರಿಕೆಯಾಗಿ ಮಾತ್ರ ಕಾಣಬಹುದು.
ತ್ರಿಶೂರ್ ಪೂರಂ ಪ್ರದರ್ಶನ ನಗರದ ಬಾಡಿಗೆಯನ್ನು 40 ಲಕ್ಷದಿಂದ 2 ಕೋಟಿಗೆ ಹೆಚ್ಚಿಸುವ ಮೂಲಕ ಸರ್ಕಾರಿ ನಿಯಂತ್ರಣದಲ್ಲಿರುವ ಕೊಚ್ಚಿನ್ ದೇವಸ್ವಂ ಮಂಡಳಿಯು ಪೂರಂ ವಿರುದ್ಧ ತಿರುಗಿ ಬಿದ್ದಿದೆ. ಇಷ್ಟು ಬಾಡಿಗೆ ವಿಧಿಸಿದರೂ ಪೂರಂ ಯಶಸ್ವಿಯಾಗಿ ನಡೆಯುತ್ತಿರುವುದರಿಂದ ಪೂರಂ ನಿಲ್ಲಿಸಲು ಬೇರೆ ಮಾರ್ಗದ ಮೂಲಕ ಯತ್ನಿಸಿದರು. ದೇವಾಲಯದ ಯೋಜನೆಯನ್ನು ರದ್ದುಪಡಿಸುವ ಮೂಲಕ ಹಿಂದೂ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ನಾಶಪಡಿಸುವ ಇಂತಹ ಕ್ರಮಗಳು ಆಕ್ಷೇಪಾರ್ಹ ಎಂದು ಕೇರಳ ಧರ್ಮಾಚಾರ್ಯ ಸಭೆ ಹೇಳಿದೆ.