ಕುಂಬಳೆ: ಕಾಸರಗೋಡು ಮತ್ತು ಮಂಜೇಶ್ವರ ತಾಲೂಕನ್ನು ಕೇರಳ ಸರ್ಕಾರ ಕನ್ನಡ ಭಾಷಾ ಪ್ರದೇಶವೆಂದು ಘೋಷಿಸಿ ಕನ್ನಡಿಗರ ಹಿತರಕ್ಷಣೆಗಾಗಿ ಅನೇಕ ಆಜ್ಞೆ ಆದೇಶಗಳನ್ನು ಹೊರಡಿಸಿದೆ. ಚುನಾವಣಾ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷದವರೂ ಕಾಸರಗೋಡನ್ನು ಸಪ್ತ ಭಾಷಾ ಸಂಗಮ ಭೂಮಿ ಎಂದು ಸಾರುತ್ತಿದೆ. ಕೆಲವು ವರ್ಷಗಳ ಹಿಂದೆ ಇಲ್ಲಿನ ಸಹಕಾರಿ ಬ್ಯಾಂಕ್‍ಗಳಿಗೆ, ಸೊಸೈಟಿಗಳಿಗೆ ಸಾಮಾನ್ಯವಾಗಿ ಸ್ಥಳೀಯ ಕನ್ನಡ; ತುಳು ಬಲ್ಲ, ಆಡಳಿತ ಮಂಡಳಿಗೆ ಸೇರಿದ ಸಮೀಪವರ್ತಿಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈಗ ಈ ನಿಯಮ ಬದಲಾಗಿ ಇಲ್ಲಿ ಬರುವ ಖಾಲಿ ಹುದ್ದೆಗಳಾದ ಕ್ಲರ್ಕ್,ಕ್ಯಾಶಿಯರ್, ಎಕೌಂಟೆಂಟ್ ಮುಂತಾದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕೇರಳ ಕೋ-ಓಪರೇಟಿವ್ ರಿಕ್ರೂಟ್‍ಮೆಂಟ್ ಬೋರ್ಡ್, ತಿರುವನಂತಪುರಕ್ಕೆ ತಿಳಿಸಬೇಕು. ಅವರು ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್‍ನಂತೆ(ಪಿ.ಎಸ್.ಸಿ) ವಿಜ್ಞಾಪನೆ ಹೊರಡಿಸಿ ಪರೀಕ್ಷೆ, ಸಂದರ್ಶನ ನಡೆಸಿ ಅಯ್ಕೆ ಪಟ್ಟಿ ತಯಾರಿಸಿ ಕನ್ನಡ ತಿಳಿಯದ ಉದೋಗಾರ್ಥಿಯನ್ನು ಆಯ್ಕೆ ಮಾಡಿ ಕಾಸರಗೋಡಿನ ಕನ್ನಡ ಭಾಗಕ್ಕೆ ನೇಮಕಾತಿಗೆ ಉಪದೇಶ ನೀಡುತ್ತಾರೆ. ಮಾತ್ರವಲ್ಲ ಕನ್ನಡ, ತುಳು ಬಲ್ಲ ಸಹಕಾರಿ ತರಬೇತಿ(ಜೆಡಿಸಿ, ಎಚ್.ಡಿ.ಸಿ) ಹೊಂದಿದ ಸಾಕಷ್ಟು ಸ್ಥಳೀಯ ಉದ್ಯೋಗಾರ್ಥಿಗಳು ಇಲ್ಲಿ ಧಾರಾಳ ಇದ್ದರೂ ಕನ್ನಡ ತುಳು ತಿಳಿಯದವರ ಆಯ್ಕೆಯಾಗುತ್ತಿವೆ. ಇದರಿಂದಾಗಿ ಇಲ್ಲಿನ ಜನರಿಗೆ ಅನ್ಯಾಯವಾಗುತ್ತಿದೆ. ಅಲ್ಲದೆ ಈ ಊರಿನ ಸಹಕಾರಿ ಸಂಘದ, ಬ್ಯಾಂಕಿನ ಸದಸ್ಯರಿಗೆ ಕನ್ನಡ, ತುಳು ತಿಳಿಯದವರಿಂದ ಸೇವೆ ದೊರಕುತ್ತಿಲ್ಲ. ಗ್ರಾಹಕರಿಂದ ಠೇವಣೆ ಸಂಗ್ರಹಿಸಲು ಸಾದ್ಯವಾಗುತ್ತಿಲ್ಲ.
ಈಗಾಗಲೇ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಕನ್ನಡ ಬಲ್ಲ ಗುಮಾಸ್ತರ ನೇಮಕಾತಿಗಾಗಿ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್‍ನವರು ಆಯ್ಕೆ ಪಟ್ಟಿ ತಯಾರಿಸಿ ಯೋಗ್ಯರನ್ನು ಆಯ್ಕೆ ಮಾಡುತ್ತಾರೆ. ಅದೇ ರೀತಿ ಸಹಕಾರಿ ಬ್ಯಾಂಕ್, ಸೊಸೈಟಿಗಳಿಗೆ ಕನ್ನಡ ಬಲ್ಲ ಕ್ಲರ್ಕ್,ಕ್ಯಾಶಿಯರ್, ಎಕೌಂಟೆಂಟ್ ನೇಮಕಾತಿ ನಡೆಸಬೇಕು. ಅದಕ್ಕಾಗಿ ಸಹಕಾರಿ ಬ್ಯಾಂಕ್‍ನ ಆಡಳಿತ ಮಂಡಳಿಯವರು ಖಾಲಿ ಹುದ್ದೆಯನ್ನು ತಿರುವನಂತಪುರದ ಸಹಕಾರಿ ರಿಕ್ರುಟ್‍ಮೆಂಟ್ ಬೋರ್ಡಿಗೆ ವರದಿ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಕನ್ನಡ,ತುಳು ಬಲ್ಲವರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂದು ಪ್ರತ್ಯೇಕವಾಗಿ ಷರಾ ಬರೆಯಬೇಕು. ಆ ಬಗ್ಗೆ ನಿಯಮದಲ್ಲಿ ತಿದ್ದಿಪಡ್ಡಿ ತರಬೇಕು, ಕೂಡಲೇ ಸಹಕಾರಿ ತರಬೇತಿ ಪಡೆದ ಉದ್ಯೋಗಾರ್ಥಿಗಳು, ಸಹಕಾರಿ ಬಂದುಗಳು, ಸಹಕಾರಿ ಭಾರತಿಯ ಪದಾರ್ಧಿಕಾರಿಗಳು, ಸಂಬಂದಿಸಿದ ಬ್ಯಾಂಕ್‍ಗಳ ಆಡಳಿತ ಮಂಡಳಿಯವರು, ಇತ್ತ ಇತ್ತ ಗಮನಿಸಬೇಕು ಎಂದು :ಶಿಕ್ಷಣ ಉದೋಗ್ಯ ಮಾಹಿತಿ ಕೇಂದ್ರ ಕಾಸರಗೋಡಿನ ನಿರ್ದೇಶಕರೂ, ಕೇರಳ ಲೋಕಸಾವಾ ಆಯೋಗದ ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ ಪ್ರಸಾದ್ ಪಾಣೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.