ಮುಳ್ಳೇರಿಯ: ನೆಕ್ರಾಜೆ ಶ್ರೀ ವಿಷ್ಣುಮೂರ್ತಿ ವಯನಾಟ್ಟು ಕುಲವನ್ ದೈವಸ್ಥಾನದಲ್ಲಿ ನಡೆಯಲಿರುವ ದೈವಂಕಟ್ಟು ಮಹೋತ್ಸವದ ಅಂಗವಾಗಿ 'ಕೂವಂ ಅಳಕ್ಕಲ್' ಕಾರ್ಯಕ್ರಮ ಜರುಗಿತು. ದೈವಂಕಟ್ಟು ಮಹೋತ್ಸವದ ಮುಂಚಿತವಾಗಿ ವಿವಿದ ಕ್ಷೇತ್ರಗಳಿಗೆ ಭತ್ತ ಅಳೆದು ನೀಡುವ ಸಂಪ್ರದಾಯ ಇದಾಗಿದೆ. ಕ್ಷೇತ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ, ಪ್ರಧಾನ ಸಂಚಾಲಕ ರತೀಶ್ ನೆಕ್ರಾಜೆ, ಕೋಶಾಧಿಕಾರಿ ಭರತ್ ಶೆಟ್ಟಿ ಮೊದಲಾದವರು ನೇತೃತ್ವ ನೀಡಿದರು.
ಪೆÇಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಸಹಿತ ವಿವಿದ ಕ್ಷೇತ್ರಗಳ ಆಚಾರ ಸ್ಥಾನಿಕರು, ಆಡಳಿತ ಸಮಿತಿ ಪದಾಧಿಕಾರಿಗಳು, ಮಹೋತ್ಸವ ಸಮಿತಿ ಪದಾಧಿಕಾರಿಗಳು, ನೆಕ್ರಾಜೆ ಮನೆತನದ ಕುಟುಂಬ ಸದಸ್ಯರು, ವಿವಿದ ಉಪ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಗವದ್ಭಕ್ತರು ಭಾಗವಹಿಸಿದ್ದರು. ದೈವಂಕಟ್ಟು ಮಹೋತ್ಸವವು ಎಪ್ರಿಲ್ 17ರಿಂದ 19ರ ವರೆಗೆ ಜರುಗಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ನೆಕ್ರಾಜೆ ಕುಟುಂಬ ತರವಾಡು ಮನೆಯಲ್ಲಿ ದೈವಕೋಲ ಸಂಪನ್ನಗೊಂಡಿತು.