ಬದಿಯಡ್ಕ: ಕೂಡ್ಲು ರಾಮದಾಸ ನಗರದಲ್ಲಿ ದೇಶೀಯ ಅಧ್ಯಾಪಕ ಪರಿಷತ್(ಎನ್.ಟಿ.ಯು) ಕಾರ್ಯಾಲಯ ಉದ್ಘಾಟನೆಯ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ವೀರಮಣಿ ಕಾಳಗ ಪ್ರಸಂಗವು ಯಶಸ್ವಿಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.
ಶತ್ರುಘ್ನನಾಗಿ ಮಾ. ಮನ್ವಿತ್ ಕೃಷ್ಣ ನಾರಾಯಣಮಂಗಲ, ಹನುಮನಾಗಿ ಕು. ಅಭಿಜ್ಞಾ ಭಟ್, ವೀರಮಣಿಯಾಗಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ಶಿವನಾಗಿ ಶಶಿಧರ ಕುದಿಂಗಿಲ ಪಾತ್ರಗಳನ್ನು ನಿರ್ವಹಿಸಿದರು. ಭಾಗವತರಾಗಿ ಕೇಶವ ಪ್ರಸಾದ, ಚೆಂಡೆ ಹಾಗೂ ಮದ್ದಳೆಗಳಲ್ಲಿ ಚೇವಾರು ಶಂಕರ ಕಾಮತ್, ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಾಗೂ ಕೃಷ್ಣಮೂರ್ತಿ ಎಡನಾಡು ಸಹಕರಿಸಿದರು.