HEALTH TIPS

'ಮನೆಯಿಂದ ಮತದಾನ'-ನೂರಹನ್ನೊಂದನೇ ವಯಸ್ಸಿನಲ್ಲಿ ಮತದಾನ ಮಾಡಿದ ಕುಪ್ಪಚ್ಚಿ

                  ಕಾಸರಗೋಡು: ನೂರಾ ಹನ್ನೊಂದನೇ ವಯಸ್ಸಿನಲ್ಲಿ ಮತದಾನ ಮಾಡುವ ಮೂಲಕ ಸಿ.ಕುಪ್ಪಚ್ಚಿ ಜಿಲ್ಲೆಯ ಸ್ಟಾರ್ ಎನಿಸಿಕೊಂಡಿದ್ದಾರೆ.  ಕುಪ್ಪಚ್ಚಿ ಅವರು ಕಾಞಂಗಾಡ್ ವಿಧಾನಸಭಾ ಕ್ಷೇತ್ರದ ಭಾಗ 20 ರ ಕ್ರಮ ಸಂಖ್ಯೆ 486 ರ ಮತದಾರರಾಗಿದ್ದಾರೆ. ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ 'ಮನೆಯಿಂದಲೇ ಮತದಾನ' ಪ್ರಕ್ರಿಯೆ ಅಂಗವಾಗಿ ಮತಗಟ್ಟೆ ಅಧಿಕಾರಿಗಳು ವೆಳ್ಳಿಕ್ಕೋತ್ ಅಡಾಟ್‍ಕುಲೋತ್ ಕಾಂಪೌಂಡ್‍ನಲ್ಲಿರುವ ಸಿ.ಕುಪ್ಪಚ್ಚಿ ಅವರ ಮನೆಗೆ ತೆರಳಿ ಮತಚಲಾವಣೆಗೆ ಅವಕಾಶ ಮಾಡಿಕೊಟ್ಟರು. ಲೋಕಸಭೆ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಕೆ. ಇನ್ಬಾಸೇಖರ್ ಖುದ್ದು ಕುಪ್ಪಚ್ಚಿ ಮನೆಗೆ ಭೇಟಿ ನೀಡಿದ್ದರು. ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ಮನೆಮನೆಗೆ ತೆರಳಿ ಮತ ನೋಂದಣಿ ಕಾರ್ಯ ಆರಂಭಗೊಂಡಿದೆ. ಇನ್ನುಳಿದ ವಿಧಾನಸಭಾ ಕ್ಷೇತ್ರಗಳಲ್ಲೂ ಮನೆಮನೆ ಮತದಾನ ಆರಂಭವಾಗಿದೆ.

                     ಮೊದಲ ಮತಗಟ್ಟೆ ಅಧಿಕಾರಿ ಕೃಷ್ಣನಾಯ್ಕ ಅವರು ಕುಪ್ಪಚ್ಚಿ ಹೆಸರು ಕರೆದು, ಗುರುತಿನ ಚೀಟಿ ಪರಿಶೀಲಿಸಿದರು.  ಎರಡನೇ ಮತಗಟ್ಟೆ ಅಧಿಕಾರಿ ಸುಬಿನ್ ರಾಜ್ ಅವರು ಕುಪ್ಪಚ್ಚಿ ತೋರು ಬೆರಳಿಗೆ ಶಾಯಿ ಸವರಿದ ನಮತರ ಕುಪ್ಪಚ್ಚಿ ಅವರ ಬೆರಳಚ್ಚು ದಾಖಲಿಸಿಕೊಳ್ಳಲಾಯಿತು.  ಮನೆಯಲ್ಲಿ ತಾತ್ಕಾಲಿಕವಾಗಿ ಹಾಕಲಾಗಿದ್ದ ಮತಯಂತ್ರಗಳಲ್ಲಿ ಮತ ಚಲಾಯಿಸಲಾಯಿತು. ಕುಪಚಿ ಅವರು ಈ ಬಾರಿ ತಮ್ಮ ಮೊಮ್ಮಗಳು ಬೇಬಿ ಅವರ ಸಹಾಯದಿಂದ ಮತ ಚಲಾಯಿಸಿದರು. ಮತ ಇರುವ ಬ್ಯಾಲೆಟ್ ಪೇಪರ್ ಅಂಟಿಸಿ ಲೋಹದ ಡ್ರಾಪ್ ಬಾಕ್ಸ್‍ನೊಳಗೆ ಹಾಕಲಾಯಿತು. ಕೇರಳ ರಾಜ್ಯದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದ ಇವರು ಕಾಸರಗೋಡು ಜಿಲ್ಲೆಯ ಅತ್ಯಂತ ಹಿರಿಯ ಮತದಾರರಾಗಿದ್ದಾರೆ.

                ಮತದಾನ ಪ್ರಕ್ರಿಯೆ ವೀಕ್ಷಿಸಿದ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಕುಪ್ಪಚ್ಚಿ ಅವರನ್ನು ಅಭಿನಂದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು. ಪ್ರಜಾಪ್ರಭುತ್ವ ಬಲಪಡಿಸಲಿರುವ ಮತದಾನದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿರುವ, ದಶಮಾನೋತ್ತರ ಶತಮಾನ ಪೂರೈಸಿರುವ ಜಿಲ್ಲೆಯ ಹಿರಿಯ ಮತದಾರೆ ಕುಪ್ಪಚ್ಚಿ ಅವರು ಈ ನಾಡಿಗೆ ಹೆಮ್ಮೆ ಮಾತ್ರವಲ್ಲ ನಾಡಿನ ಜನತೆಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು.   

               ಕಾಞಂಗಾಡು ಕ್ಷೇತ್ರದ ಮನೆ ಮತ ವಿಶೇಷಾಧಿಕಾರಿ ಜಿಲ್ಲಾ ನಗರ ಯೋಜನಾಧಿಕಾರಿ ಲಿಲಿಟಿ ಥಾಮಸ್,   ಮೈಕ್ರೋವೀಕ್ಷಕ ಎಸ್.ಕೆ.ಮಹೇಶಲಾಲ್, ಬೂತ್ ಮಟ್ಟದ ಅಧಿಕಾರಿ ಮೊಯ್ದು, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries