ಉಪ್ಪಳ: ಬಾಯಾರು ಕಣಿಹಿತ್ತಿಲಿನಲ್ಲಿರುವ ಶ್ರೀಮಲರಾಯಿ ಧೂಮಾವತೀ ಪಂಜುರ್ಲಿ ನಾಗ ಪರಿವಾರ ದೈವಸ್ಥಾನದ ನೂತನ ತರವಾಡು ಮನೆಯ ಗೃಹ ಪ್ರವೇಶೋತ್ಸವ ಹಾಗೂ ಸತ್ಯ ಚಾವಡಿಯ ಸಮರ್ಪಣೆ ಪುನರ್ ಪ್ರತಿಷ್ಠೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ನೇತೃತ್ವದಲ್ಲಿ ಜರಗಿತು.
ಬಳಿಕ ವೆಂಕಟ್ರಮಣ ದೇವರ ಹರಿಸೇವೆ, ಸಂಜೆ ರಾಹು ಗುಳಿಗ ತಂಬಿಲ, ರಾತ್ರಿ ಕಲ್ಲಾಲ್ದ ಗುಳಿಗ ನೇಮೋತ್ಸವ ಜರಗಿತು. ಕುಕ್ಕಾಜೆ ಶ್ರೀ ಕಾಳಿಕಾಂಬ ಅಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಕ್ಷೇತ್ರಕ್ಕೆ ಭೇಟಿ ನೀಡಿದರು.