ಕಾಸರಗೋಡು: ನಾಮಪತ್ರ ಹಿಂಪಡೆಯುವ ಕಾಲಾವಧಿ ಕಳೆಯುತ್ತಿದ್ದಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಂಬತ್ತು ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ನಾಮಪತ್ರಗಳ ಪರಿಶೀಲನೆಗೆ ಸ್ವೀಕರಿಸಿದ ಎಲ್ಲಾ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಚಿಹ್ನೆ ಮಂಜೂರು ಮಾಡಿದರು.
ಎಂ.ಎಲ್.ಅಶ್ವಿನಿ, ಭಾರತೀಯ ಜನತಾ ಪಾರ್ಟಿ-ತಾವರೆ, ಎಂ.ವಿ ಬಾಲಕೃಷ್ಣನ್ ಮಾಸ್ಟರ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸ್ ವಾದಿ)-ಸುತ್ತಿಗೆ ಕುಡಗೋಲು ನಕ್ಷತ್ರ, ರಾಜ್ ಮೋಹನ್ ಉನ್ಣಿತ್ತಾನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್-ಹಸ್ತ, ಕೆ. ಸುಕುಮಾರಿ ಎಂ, ಬಹುಜನ ಸಮಾಜ ಪಕ್ಷ-ಆನೆ, ಅನೀಶ್ ಪಯ್ಯನ್ನೂರು, (ಸ್ವತಂತ್ರ), ಆಟೋರಿಕ್ಷಾ, ಎನ್.ಕೇಶವ ನಾಯಕ್, (ಸ್ವತಂತ್ರ)-ಕಬ್ಬು ರೈತ, ಬಾಲಕೃಷ್ಣನ್.ಎನ್, (ಸ್ವತಂತ್ರ)-ಚೆಸ್ ಬೋರ್ಡ್, ಮನೋಹರನ್ ಕೆ, (ಸ್ವತಂತ್ರ)-ಬ್ಯಾಟ್, ರಾಜೇಶ್ವರಿ ಕೆ.ಆರ್. (ಸ್ವತಂತ್ರ) ಅವರಿಗೆ ಸೈಕಲ್ ಪಂಪ್ ಚಿಹ್ನೆ ಹಂಚಿಕೆ ಮಾಡಲಾಗಿದೆ.