HEALTH TIPS

ಸಪ್ತ ಭಾಷೆ ಮತ್ತು ಸಂಕೇತ ಭಾಷೆಯ ಕರೆ ಕೇಂದ್ರದ ಚುನಾವಣಾ ನಿಯಂತ್ರಣ ಕೊಠಡಿ ಕಾರ್ಯಾರಂಭ

                   ಕಾಸರಗೋಡು: ಲೋಕಸಭಾ ಚುನಾವಣೆಯ ಭಾಗವಾಗಿ, ಶ್ರವಣ ಮತ್ತು ವಾಕ್ ದೋಷÀವಿರುವವರಿಗೆ ಸಂಕೇತ ಭಾಷೆಯ ವೀಡಿಯೊ ಕರೆ ವ್ಯವಸ್ಥೆ ಮತ್ತು ಏಳು ಭಾಷೆಗಳಲ್ಲಿ ವ್ಯವಹರಿಸುವ ನಿಯಂತ್ರಣ ಕೊಠಡಿ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು.         

                   ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿಯೂ ಆದ ಕೆ.ಇನ್ಬಾಶೇಖರ್ ದೃಶ್ಯ ಕರೆಯಲ್ಲಿ ಮಾತನಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದೇಶದಲ್ಲಿ ಪ್ರಥಮ ಬಾರಿಗೆ, ಒಂದೇ ನಿಯಂತ್ರಣ ಕೊಠಡಿಯಿಂದ 11 ಭಾಷೆಗಳಲ್ಲಿ ಸೇವಾ ಸೌಲಭ್ಯ ಕಲ್ಪಿಸಿರುವುದು ಕಾಸರಗೋಡಿನ ಹೆಮ್ಮೆಯಾಗಿ ದಾಖಲೆ ಸೃಷ್ಟಿಸಿತು.  

                  ಜಿಲ್ಲೆಯನ್ನು ಹೊರತುಪಡಿಸಿ, ರಾಜ್ಯದ ಯಾವುದೇ ಭಾಗದಲ್ಲಿರುವ ಶ್ರವಣ ಮತ್ತು ವಾಕ್ ದೋಷ ಹೊಂದಿರುವ ಯಾರಿಗೂ ಸಂಕೇತ ಭಾಷೆಯ ವೀಡಿಯೊ ಕರೆ ವ್ಯವಸ್ಥೆಯ ಪ್ರಯೋಜನವನ್ನು ಪಡೆಯಬಹುದು.

                   ಪ್ರಭಾರ ಅಧಿಕಾರಿ ಆದಿಲ್ ಮುಹಮ್ಮದ್ ಅವರು ಚುನಾವಣಾ ನಿಯಂತ್ರಣ ಕೊಠಡಿಯ ನೇತೃತ್ವ ವಹಿಸಿದ್ದಾರೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮಾತನಾಡಲು ಸಾಧ್ಯವಾಗದ ಜನರಿಗಿರುವ ಅನುಮಾನ ಮತ್ತು ದೂರುಗಳನ್ನು ನಿವಾರಿಸಲು ಇಂತಹ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ. 

           ಸಂಕೇತ ಭಾಷೆಯ ಕರೆ ಕೇಂದ್ರ ಸೋಮವಾರದಿಂದ ಗುರುವಾರ ಏಪ್ರಿಲ್ 25ರ ವರೆಗೆ ಕಾರ್ಯನಿರ್ವಹಿಸಲಿದೆ.  


            9947824180, 7558068930 ಮತ್ತು 9048641188 ವಾಟ್ಸಾಪ್ ಸಂಖ್ಯೆಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ದೃಶ್ಯ ಕರೆ ಮಾಡಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯ ಗುಮಾಸ್ತ ಟಿ.ಪವಿತ್ರನ್, ಹಿರಿಯ ದರ್ಜೆ ಬೆರಳಚ್ಚುಗಾರ ಅಬುಲ್ ರಹೀಂ ಮತ್ತು ಜಿಎಸ್‍ಟಿ ಬೆರಳಚ್ಚುಗಾರ ಅತುಲ್ ರಾಜ್ ಅವರು ವೀಡಿಯೊ ಕರೆ ಸ್ವೀಕರಿಸಿ ಸಂಜ್ಞೆ ಭಾಷೆಯ ಮೂಲಕ ಅನುಮಾನಗಳನ್ನು ನಿವಾರಿಸುತ್ತಾರೆ. 

                ಅಲ್ಲದೆ, ಸೋಮವಾರ, ಏಪ್ರಿಲ್ 22 ಮತ್ತು ಮಂಗಳವಾರ, ಏಪ್ರಿಲ್ 23 ರಂದು ನಿಯಂತ್ರಣ ಕೊಠಡಿಯ ಮೂಲಕ ಏಳು ಭಾಷೆಗಳಲ್ಲಿ ಸಾರ್ವಜನಿಕರ ಸಂಶಯಗಳಿಗೆ ಪರಿಹಾರ ಸೂಚಿಸುವ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿತ್ತು. ಮಲಯಾಳಂ, ಕನ್ನಡ, ಬ್ಯಾರಿ, ತುಳು, ಉರ್ದು, ಕೊಂಕಣಿ ಮತ್ತು ಮರಾಠಿ ಭಾಷೆ ಅಲ್ಲದೆ, ಇಂಗ್ಲಿಷ್, ಹಿಂದಿ ಮತ್ತು ತಮಿಳಿನಲ್ಲಿಯೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೇವೆಗಳ ಅಗತ್ಯವಿರುವವರು ಟೋಲ್ ಫ್ರೀ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದು. ಮೊದಲ ಕರೆ ಬ್ಯಾರಿ ಭಾಷೆಯಲ್ಲಿತ್ತು.

              ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ, ಚುನಾವಣಾ ನಿಯಂತ್ರಣ ಕೊಠಡಿಯ ಪ್ರಭಾರ ಅಧಿಕಾರಿ ಆದಿಲ್ ಮುಹಮ್ಮದ್, ಮ್ಯಾನ್ ಪವರ್ ಮ್ಯಾನೇಜ್‍ಮೆಂಟ್ ನೋಡಲ್ ಅಧಿಕಾರಿ ಆಸಿಫಲಿಯಾರ್, ಪಿಡಬ್ಲ್ಯೂಡಿ ನೋಡಲ್ ಅಧಿಕಾರಿ ಆರ್ಯ ಪಿ.ರಾಜ್, ಸಾರಿಗೆ ನೋಡಲ್ ಅಧಿಕಾರಿ ಅಜಿತ್ ಜಾನ್, ಅಜಿತಾ, ತಹಸೀಲ್ದಾರ್ ವಿ.ಶಿನು, ಬಿ.ನಿಶಾ, ಜಿ.ರಶ್ಮಿ, ಎಂ.ಎ.ರಮ್ಯಾ, ಸಿಂಧು, ಟಿ.ಪವಿತ್ರನ್, ನ್ಯಾಯವಾದಿ. ಆಯಿಷಾ ಆಫ್ರಿನ್, ನೋಯೆಲ್ ರೋಡ್ರಿಗಸ್, ಉದಯ್ ಪ್ರಕಾಶ್, ಕಿಶೋರ್ ಕುಮಾರ್, ಉಷಾದೇವಿ ಮತ್ತು ನಿಯಂತ್ರಣ ಕೊಠಡಿ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries