ಜೈಪುರ: ಕಳೆದ 10 ವರ್ಷಗಳಲ್ಲಿ ನಮ್ಮ (ಬಿಜೆಪಿ) ಸರ್ಕಾರ ಮಾಡಿರುವ ಕೆಲಸಗಳು ಕೇವಲ ಟ್ರೇಲರ್ ಮಾತ್ರವಾಗಿದ್ದು, ಇನ್ನೂ ಬಹಳಷ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಜೈಪುರ: ಕಳೆದ 10 ವರ್ಷಗಳಲ್ಲಿ ನಮ್ಮ (ಬಿಜೆಪಿ) ಸರ್ಕಾರ ಮಾಡಿರುವ ಕೆಲಸಗಳು ಕೇವಲ ಟ್ರೇಲರ್ ಮಾತ್ರವಾಗಿದ್ದು, ಇನ್ನೂ ಬಹಳಷ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗುವ ಗುರಿಯನ್ನು ಹೊಂದಿದ್ದಾರೆ.
ರಾಜಸ್ಥಾನದ ಚುರು ಪ್ರದೇಶದಲ್ಲಿ ನಡೆದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ ಅವರು, ಎಷ್ಟೇ ಅಭಿವೃದ್ಧಿ ಕಾರ್ಯಗಳು ನಡೆದರೂ, ಇಲ್ಲಿಯವರೆಗೆ ನಡೆದಿರುವುದು ಬರಿ ಟ್ರೇಲರ್ ಮಾತ್ರ. ಇನ್ನೂ ಬಹಳಷ್ಟಿದೆ ಎಂದು ಹೇಳಿದ್ದಾರೆ.
ಮಾಡಬೇಕಾದ ಕೆಲಸ ಬಹಳಷ್ಟಿವೆ. ಕನಸುಗಳು ಸಾಕಷ್ಟಿವೆ. ನಾವು ದೇಶವನ್ನು ಬಹಳ ಮುಂದಕ್ಕೆ ಕೊಂಡೊಯ್ಯಬೇಕಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ವಿರುದ್ಧವೂ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ಈ ಮೈತ್ರಿಕೂಟಕ್ಕೆ ತಮ್ಮದೇ ಆದ ಹಿತಾಸಕ್ತಿಗಳಿವೆ. ಬಡವರು, ದಲಿತರು, ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ಆದ್ಯತೆ ಕೊಡುವುದಿಲ್ಲ ಎಂದು ಆರೋಪಿಸಿದರು.
ದೇಶವನ್ನು ವಿಭಜಿಸಲು ಮತ್ತು ಸೇನೆಯನ್ನು ಅವಮಾನಿಸಲು ಕಾಂಗ್ರೆಸ್ ಹೆಸರುವಾಸಿಯಾಗಿದೆ ಎಂದು ಅವರು ಟೀಕಿಸಿದರು.
'ತ್ರಿವಳಿ ತಲಾಖ್' ರದ್ದು ಮಾಡುವ ಮೂಲಕ ಮುಸ್ಲಿಂ ಸಹೋದರಿಯರೊಂದಿಗೆ ಮುಸ್ಲಿಂ ಕುಟುಂಬಗಳನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಅವರು ಉಲ್ಲೇಖಿಸಿದರು.