ವಯನಾಡು: ಕೇಂದ್ರ ಬಿಜೆಪಿ ಸರ್ಕಾರವು ದೇಶದಲ್ಲಿ 'ಒಬ್ಬನೇ ನಾಯಕ' ಎಂಬ ಪರಿಕಲ್ಪನೆಯನ್ನು ಹೇರುತ್ತಿದೆ, ಈ ಮೂಲಕ ದೇಶದ ಜನರನ್ನು ಅವಮಾನಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕಿಡಿಕಾರಿದ್ದಾರೆ.
ವಯನಾಡು: ಕೇಂದ್ರ ಬಿಜೆಪಿ ಸರ್ಕಾರವು ದೇಶದಲ್ಲಿ 'ಒಬ್ಬನೇ ನಾಯಕ' ಎಂಬ ಪರಿಕಲ್ಪನೆಯನ್ನು ಹೇರುತ್ತಿದೆ, ಈ ಮೂಲಕ ದೇಶದ ಜನರನ್ನು ಅವಮಾನಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕಿಡಿಕಾರಿದ್ದಾರೆ.
ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಾರತವು ಹೂವಿನ ಗುಚ್ಛದಂತೆ. ಗುಚ್ಚದ ಸೌಂದರ್ಯಕ್ಕೆ ಪ್ರತಿಯೊಂದು ಹೂವಿನ ಪಾತ್ರವಿರುತ್ತದೆ. ಹಾಗಾಗಿ, ಪ್ರತಿಯೊಂದನ್ನೂ ಗೌರವಿಸಬೇಕು. ಹೀಗಾಗಿ ಭಾರತವು ಒಬ್ಬನೇ ನಾಯಕ ಎಂಬ ಪರಿಕಲ್ಪನೆಗೆ ಹೊಂದಿಕೆಯಾಗುವುದಿಲ್ಲ. ಬಿಜೆಪಿಯ ಒಬ್ಬ ನಾಯಕ ಪರಿಕಲ್ಪನೆಯಿಂದಾಗಿ ಪ್ರತಿಯೊಬ್ಬ ಯುವ ಭಾರತೀಯನಿಗೆ ಅವಮಾನವಾಗಿದೆ ಎಂದು ವಾಗ್ದಾಳಿ ನಡೆಸಿದರು.
'ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದದ್ದು, ಆರ್‌ಎಸ್‌ಎಸ್ ಸಿದ್ದಾಂತಕ್ಕೆ ಒಳಪಡುವಿಕೆಗಾಗಿ ಅಲ್ಲ. ಕಾಂಗ್ರೆಸ್ ದೇಶದ ಎಲ್ಲಾ ಜನರು ಆಳ್ವಿಕೆಯಲ್ಲಿ ಭಾಗಿಯಾಗಬೇಕೆಂದು ಬಯಸುತ್ತದೆ 'ಎಂದು ರಾಹುಲ್ ತಿಳಿಸಿದ್ದಾರೆ.
'ಕಾಂಗ್ರೆಸ್ ದೇಶದ ಜನರ ಮಾತನ್ನು ಕೇಳಲು, ಅವರ ಭಾಷೆ, ಧರ್ಮ , ಸಂಸ್ಕೃತಿಯನ್ನು ಪ್ರೀತಿಸಲು ಬಯಸುತ್ತದೆ. ಆದರೆ ಬಿಜೆಪಿ ಇಂತಹ ಚಿಂತನೆಗಳಿಗೆ ವಿರುದ್ಧವಾಗಿದೆ ಎಂದು ರಾಹುಲ್ ಆರೋಪಿಸಿದರು.
ವಯನಾಡು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಅವರು, ಜಿಲ್ಲೆಯಲ್ಲಿ ಎರಡನೇ ಬಾರಿಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು.