ಬದಿಯಡ್ಕ: ಏ. 28 ರಂದು ಸಂಜೆ 6 ಕ್ಕೆ ಶ್ರೀ ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಎಡನೀರು ಶ್ರೀಮಠಕ್ಕೆ ಚಿತ್ತೈಸಲಿದ್ದು, ಶ್ರೀಮಠದಲ್ಲಿ ವಾಸ್ತವ್ಯ ಇರುವ ಶ್ರೀಗಳ ಕಾರ್ಯಕ್ರಮದ ಯಶಸ್ವಿಗಾಗಿ ಎಡನೀರು ಶ್ರೀಮಠದ ಭಕ್ತಾದಿಗಳ ಸಭೆ ಇಂದು( 14.04.2024) ಭಾನುವಾರ ಬೆಳಿಗ್ಗೆ 10.30 ಕ್ಕೆ ಎಡನೀರು ಶ್ರೀಮಠದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಈ ಸಭೆಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.