ಕಾಸರಗೋಡು: ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗಮಂಟಪದಲ್ಲಿ ಏ. 11 ರಂದು ಗುರುವಾರ “ಕೇರಳ-ಕರ್ನಾಟಕ 'ಗಡಿನಾಡು' ಕನ್ನಡ ಸಾಂಸ್ಕೃತಿಕ ಉತ್ಸವ 2024” ಕನ್ನಡ ಭವನ ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಹಾಗೂ ಬಿ. ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್ ಕೋಲಾರ ಜಂಟಿ ಆಯೋಜನೆಯಲ್ಲಿ ನಡೆಯಲಿದೆ. ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಶ್ರೀಮಠದಲ್ಲಿ ಬಿಡುಗಡೆಗೊಳಿಸಿ ಶುಭಾಶೀರ್ವಾದ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿ ವೃದ್ಧಿ ಪ್ರಾಧಿ ಕಾರ ಸದಸ್ಯರಾದ ಎ. ಆರ್. ಸುಬ್ಬಯ್ಯಕಟ್ಟೆ, ಸಭಾಧ್ಯಕ್ಷ ರವಿ ನ್ಯಾಕಾಪು, ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ಪ್ರೊ. ಎ. ಶ್ರೀನಾಥ್, ಅರಿಬೈಲ್ ಗೋಪಾಲ ಶೆಟ್ಟಿ, ವಿಶಾಲಾಕ್ಷ ಪುತ್ರಕಳ, ಶ್ರೀಧರ ಶೆಟ್ಟಿ ಮುಟ್ಟಮ್, ವೆಂಕಟ ಭಟ್ ಎಡನೀರು, ವಸಂತ ಬಾರಡ್ಕ, ಮುರಳಿ ನೀರ್ಚಾಲು ಮುಂತಾದವರಿದ್ದರು.