ಕಾಸರಗೋಡು: ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಅನುಮತಿಗಳಿಗಾಗಿ ಚುನಾವಣಾ ಆಯೋಗದ ವೆಬ್‍ಸೈಟ್ https://suvidha.eci.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು, ಅಭ್ಯರ್ಥಿ ಪ್ರತಿನಿಧಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಚುನಾವಣಾ ಏಜೆಂಟ್ ಗಳು ಮತ್ತು ಇತರರು ವಿವಿಧ ಉದ್ದೇಶಗಳಿಗಾಗಿ ಅರ್ಜಿ ಸಲ್ಲಿಸಬಹುದು.
ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಓ ಟಿ ಪಿ ಪರಿಶೀಲನೆ ಮಾಡಿದ ನಂತರ ಸೈಟ್‍ನಲ್ಲಿ ನೋಂದಾಯಿಸಬೇಕು. ಸಭೆ, ಮೆರವಣಿಗೆ ಮೊದಲಾದವುಗಳನ್ನು ನಡೆಸಲು ಬೇಕಾದ ಅನುಮತಿ, ಧ್ವನಿವರ್ಧಕ ಅನುಮತಿ, ವೀಡಿಯೋ ವ್ಯಾನ್ ಬಳಕೆಗೆ ಬೇಕಾದ ಅನುಮತಿ, ವಾಹನಗಳ ಬಳಕೆಗೆ ಬೇಕಾದ ಅನುಮತಿ ಮುಂತಾದ 27 ಬಗೆಯ ಅನುಮತಿಗಳಿಗೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ವೆಬ್‍ಸೈಟ್ ಹೊಂದಿದೆ. ಕೆಲವು ಅನುಮತಿಗಳಿಗೆ ಪೆÇೀಲಿಸ್ ಕ್ಲಿಯರೆನ್ಸ್‍ನ ಅಗತ್ಯವಿದೆ. ಇದಕ್ಕಾಗಿ ಚುನಾವಣಾಧಿಕಾರಿಯಿಂದ ಅನುಮತಿ ಪಡೆದು ಸಮೀಪದ ಪೆÇಲೀಸ್ ಠಾಣೆಗೆ ತೆರಳಿ ಚಲಾನ್ ಪಾವತಿಸಿ ಕಾರ್ಯಕ್ರಮ ನಡೆಸಬಹುದು ಎಂದು ಪ್ರಕಟಣೆ ತಿಳಿಸಿದೆ.