ಮಂಜೇಶ್ವರ : ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರ ಕುಂಜತ್ತೂರು ಕಲಾ ಸಂಸ್ಥೆಯ ಐದನೇ ವರ್ಷದ ವಾರ್ಷಿಕೋತ್ಸವವು ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಹಿಮ್ಮೇಳವಾದಕ ಕೋಳ್ಯೂರು ಭಾಸ್ಕರ ಹಾಗೂ ಭಾಗವತ ದಯಾನಂದ ಕೋಡಿಕಲ್ ಅವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಚಕ್ರತೀರ್ಥ, ಮಹಾಲಿಂಗೇಶ್ವರ ವಿದ್ಯಾನಿಕೇತನದ ಅಧ್ಯಕ್ಷ ಸುರೇಶ ಶೆಟ್ಟಿ ಬಳಕ, ಯಕ್ಷಗಾನ ಸಂಘಟಕ ಹಾಗೂ ಕಲಾವಿದ ಗಣೇಶ ಕುಂಜತ್ತೂರು, ರಮೇಶ ಶೆಟ್ಟಿ ಕುಂಜತ್ತೂರು ಉಪಸ್ಥಿತರಿದ್ದರು.