ಬದಿಯಡ್ಕ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ(ರಿ) ಕಾಸರಗೋಡು, ಕುಂಬಳೆ ಉಪಜಿಲ್ಲಾ ಘಟಕದ ನೇತೃತ್ವದಲ್ಲಿ ಕನ್ನಡ ಮಾಧ್ಯಮಕ್ಕೆ ಮಕ್ಕಳ ಸೇರ್ಪಡೆ ಉತ್ತೇಜಿಸುವ ದೃಷ್ಟಿಯಿಂದ ಪ್ರೋಮೋ ವೀಡಿಯೋ ಸ್ಪರ್ಧೆ ಏರ್ಪಡಿಸಿ ಗಮನ ಸೆಳೆದಿದೆ.
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಐದು ಮೆಚ್ಚುಗೆ ಹುಮಾನಗಳನ್ನು ಘೋಷಿಸಲಾಗಿದೆ.
ವೀಡಿಯೋಗಳು ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಸೇರ್ಪಡೆಗೊಳಿಸಲು ಪ್ರೇರೇಪಿಸುವಂತಿರಬೇಕು.
ವೀಡಿಯೋಗಳ ಸಮಯಮಿತಿ ಗರಿಷ್ಠ 1 ನಿಮಿಷ.
ಅಗತ್ಯಕ್ಕೆ ತಕ್ಕಂತೆ ಸ್ಥಳೀಯ ಭಾಷೆಗಳನ್ನು ಬಳಸಬಹುದು.
ಸಾಮಾಜಿಕ ಸಾಮರಸ್ಯ ಘಾತಿಸುವ ಯಾವುದೇ ವಿವಾದಾತ್ಮಕ ಅಂಶಗಳನ್ನೊಳಗೊಂಡಿರಬಾರದು.
ಪ್ರಥಮ ಸುತ್ತಿನ ಪರಿಶೀಲನೆಯ ಬಳಿಕ ಆರಿಸಲ್ಪಟ್ಟ ವೀಡಿಯೋಗಳನ್ನು ನಮ್ಮ 'ಜ್ಞಾನ ಯಾನ' ಯೂಟ್ಯೂಬ್ ಚಾನಲ್ ಲ್ಲಿ ಅಪ್ಲೋಡ್ ಮಾಡಲಾಗುವುದು. ಎರಡು ವಾರದ ಬಳಿಕ ಇರುವ ವೀಕ್ಷಣೆ(ವ್ಯೂಸ್), ಒಪ್ಪಿಗೆ(ಲೈಕ್ಸ್) ಶೇ.50 ಹಾಗೂ ನಿರ್ಣಾಯಕರ ಅಂಕಗಳು ಶೇ.50 ಒಟ್ಟು ಸೇರಿಸಿ ಸ್ಥಾನ ನಿರ್ಣಯ ಮಾಡಲಾಗುತ್ತದೆ.
ವೀಡಿಯೋಗಳನ್ನು ಏಪ್ರಿಲ್ 10ರೊಳಗಾಗಿ 9645057760 ನಂಬರ್ ಗೆ ಟೆಲಿಗ್ರಾಂ ಆಪ್ ಮೂಲಕ ಕಳುಹಿಸಲು ಸೂಚಿಸಲಾಗಿದೆ.