ಕಾಸರಗೋಡು: ಲೋಕಸಭಾ ಕ್ಷೇತ್ರದಲ್ಲಿ ಪಯ್ಯನ್ನೂರು ವಿಧಾನಸಭಾ ಕ್ಷೇತ್ರ ಅತೀ ಹೆಚ್ಚು ಮತದಾರರಿರುವ ಮತಗಟ್ಟೆಯನ್ನು ಹೊಂದಿದೆ. ಪಯ್ಯನ್ನೂರು ಕ್ಷೇತ್ರದಲ್ಲಿರುವ 1694 ಮತದಾರರಿರುವ ಮತಗಟ್ಟೆ ಸಂಖ್ಯೆ 116 ಜಿಎಚ್‍ಎಸ್‍ಎಸ್ ರಾಮಂತಳಿಯಲ್ಲಿದೆ. ಕಡಿಮೆ ಮತದಾರರಿರುವ ಮತಗಟ್ಟೆ ತ್ರಿಕರಿಪುರ ಕ್ಷೇತ್ರದಲ್ಲಿ 234 ಮತದಾರರನ್ನು ಹೊಂದಿರುವ 152ನೇ ಬೂತ್ ಸಂಖ್ಯೆಯ ವಲಿಯ ಪರಂಬ್ ಗ್ರಾಮ ಪಂಚಾಯಿತಿಯ ವಡಕ್ಕೇಕಾಡ್ ಅಂಗನವಾಡಿಯಾಗಿದೆ.
ಮಂಜೇಶ್ವರ ಕ್ಷೇತ್ರದಲ್ಲಿ ಬೂತ್ ಸಂಖ್ಯೆ 40 ಬಾಕ್ರಬೈಲು ಎಯುಪಿಎಸ್ ಪಾತೂರು ಮಂಜೇಶ್ವರ ಅತಿ ಹೆಚ್ಚು ಮತದಾರರನ್ನು ಹೊಂದಿದ್ದು ಇಲ್ಲಿ 1440 ಮತದಾರರಿದ್ದಾರೆ. ಕಡಿಮೆ ಮತದಾರರಿರುವ ಬೂತ್ 596 ಮತದಾರರನ್ನು ಹೊಂದಿರುವ ಸ್ವರ್ಗದ 201ನೇ ಸಂಖ್ಯೆಯ ಸ್ವಾಮಿ ವಿವೇಕಾನಂದ ಎಯುಪಿ ಶಾಲಾ ಮತಗಟ್ಟೆಯಾಗಿದೆ.
ಕಾಸರಗೋಡು ಕ್ಷೇತ್ರದಲ್ಲಿ 1403 ಮತದಾರರನ್ನು ಹೊಂದಿರುವ 27ನೇ ಸಂಖ್ಯೆಯ ಉಳಿಯತ್ತಡ್ಕದ ಅಟಲ್‍ಜಿ ಸಮುದಾಯ ಭವನದಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಯಾದರೆ ಉದಯಗಿರಿ ಎಸ್‍ಎಸ್‍ಪಿಎಎಲ್‍ಪಿಎಸ್‍ನ 50ನೇ ಮತಗಟ್ಟೆಯಲ್ಲಿ 432 ಮತದಾರರಿದ್ದು, ಕಡಿಮೆ ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ.
ಉದುಮ ಕ್ಷೇತ್ರದಲ್ಲಿ 123ನೇ ಸಂಖ್ಯೆಯ ಮತಗಟ್ಟೆ ಜಿಯುಪಿಎಸ್ ಅಗಸರಹೊಳೆಯಲ್ಲಿ 1479 ಮತದಾರರನ್ನು ಹೊಂದಿರುವ ಅತಿ ಹೆಚ್ಚುಮತದಾರರನ್ನು ಹೊಮದಿರುವ ಮತಗಟ್ಟೆಯಾಗಿದ್ದರೆ, ಉದುಮದ 92ನೇ ಸಂಖ್ಯೆಯ ಜಿಎಚ್‍ಎಸ್‍ಎಸ್ ಮತಗಟ್ಟೆ 487 ಮತದಾರರನ್ನು ಹೊಂದಿದ್ದು ಅತಿ ಕಡಿಮೆ ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ. .
ಕಾಞಂಗಾಡು ಕ್ಷೇತ್ರದ ಮತಗಟ್ಟೆ ಸಂಖ್ಯೆ 145ರ ತೋಯಮ್ಮಾಲ್ ಸಾಂಸ್ಕøತಿಕ ಕೇಂದ್ರದಲ್ಲಿ 1459 ಮತದಾರರಿದ್ದು, ಅತಿ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ. ಪಾಣತ್ತೂರಿನ 106ನೇ ಜಿಎಚ್‍ಎಸ್ ಮತಗಟ್ಟೆಯಲ್ಲಿ 629 ಮತದಾರರಿದ್ದು ಅತಿ ಕಡಿಮೆ ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ.
ತ್ರಿಕರಿಪುರ ಕ್ಷೇತ್ರದ ಪಿಎಂಎಸ್‍ಎಪಿಟಿಎಸ್‍ವಿಎಚ್‍ಎಸ್‍ಎಸ್ ಕೈಕೋಟ್ ಕಡವ್‍ನ 189ನೇ ಮತಗಟ್ಟೆಯಲ್ಲಿ 1529 ಮತದಾರರಿದ್ದು, ಅತಿ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ. ವಲಿಯಪರಂಬ ಗ್ರಾಮ ಪಂಚಾಯಿತಿ ಅಂಗನವಾಡಿ ಸಭಾಂಗಣದ 152ನೇ ಸಂಖ್ಯೆಯ ವಡಕ್ಕೇಕ್ಕಾಡ್ ಮತಗಟ್ಟೆ, 234 ಮತದಾರರನ್ನು ಹೊಂದಿದ್ದು ಅತೀ ಕಡಿಮೆ ಮತದಾರರನ್ನು ಹೊಂದಿದೆ.
ಕಲ್ಯಾಶ್ಶೇರಿ ಕ್ಷೇತ್ರದ 141ನೇ ಸಂಖ್ಯೆ ಮಾತುಲ್ ನಾರ್ತ್ ಯು ಪಿ ಶಾಲೆ 1470 ಮತದಾರರಿದ್ದು, ಅತಿ ಹೆಚ್ಚು ಮತದಾರರನ್ನು ಹೊಂದಿದೆ. 666 ಮತದಾರರನ್ನು ಹೊಂದಿರುವ ಮತಗಟ್ಟೆ ಸಂಖ್ಯೆ 96 ಪಟ್ಟುವಂ ಯುಪಿ ಶಾಲೆ ಕಡಿಮೆ ಮತದಾರರಿರುವ ಮತಗಟ್ಟೆಯಾಗಿದೆ.