ಕಾಸರಗೋಡು: ಮತಗಟ್ಟೆಗಳ ಕರ್ತವ್ಯ ಲಭಿಸಿ, ಎಪ್ರಿಲ್ 3 ಮತ್ತು 4 ರಂದು ಪರೀಕ್ಷಾ ಮೌಲ್ಯಮಾಪನ ಕರ್ತವ್ಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮತಗಟ್ಟೆಯ ಕುರಿತಾದ ತರಬೇತಿ ಪಡೆಯದ ಶಿಕ್ಷಕರಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಎಪ್ರಿಲ್ 5 ರಂದು ಬೆಳಗ್ಗೆ 9.30ರಿಂದ ವಿಶೇಷ ತರಬೇತಿ ತರಗತಿ ನಡೆಸಲಾಗುವುದು. ಈ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮತಗಟ್ಟೆಯ ಇತರ ಯಾವುದೇ ಅಧಿಕಾರಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ತರಬೇತಿ ನೋಡಲ್ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮ್ಮದ್ ತಿಳಿಸಿದ್ದಾರೆ.