ಕಾಸರಗೋಡು: ಮತಗಟ್ಟೆ ಅದಿಕಾರಿಗಳ ಎರಡನೇ ಸುತ್ತಿನ ರ್ಯಾಂಡಮೈಸೇಶನ್ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು. ಜನರಲ್ ಒಬ್ಸರ್ವರ್ ರಿಷಿರೇಂದ್ರ ಕುಮಾರ್ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಎರಡನೇ ಸುತ್ತಿನ ರ್ಯಾಂಡಮೈಸೇಶನ್ ಬಗ್ಗೆ ಸಮಗ್ರ ಮಾಃಇತಿ ನೀಡಿದರು.
ಅಪರ ಜಿಲ್ಲಾದಿಕಾರಿ ಸುಫಿಯಾನ್ ಅಹಮದ್, ಮಾನವ ಸಂಪನ್ಮೂಲ ನಿರ್ವಹಣಾ ನೋಡಲ್ ಅಧಿಕಾರಿ ಆಸಿಫ್ ಅಲಿಯಾರ್, ಐಟಿ ನೋಡಲ್ ಅಧಿಕಾರಿ ಎ. ಲೀನಾ, ಅಂಚೆ ಮತಪತ್ರ ನೋಡಲ್ ಅಧಿಕಾರಿ ಎಂ. ಸುರ್ಜಿತ್, ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಪಿ. ಅಖಿಲ್ ುಪಸ್ಥಿತರಿದ್ದರು. ಎರಡನೇ ಸುತ್ತಿನ ರ್ಯಾಂಡಮೈಸೇಶನ್‍ನಲ್ಲಿ ತೊಡಗಿರುವ ಸಿಬ್ಬಂದಿಗೆ ಏಪ್ರಿಲ್ 18, 19 ಮತ್ತು 20 ರಂದು ತರಬೇತಿ ನೀಡಲಾಗುವುದು. ಈ ಸಂದರ್ಭ ಆರ್ಡರ್ ಸಾಫ್ಟ್‍ವೇರ್‍ನಲ್ಲಿ, ಉದ್ಯೋಗಿಗಳು ಆರ್ಡರ್‍ಗಳನ್ನು ಪೆÇೀಸ್ಟ್ ಮಾಡುವ ಮತ್ತು ತರಬೇತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ.