ಕಾಸರಗೋಡು: ಉದುಮ ಬಾರಾ ಮುಕುನ್ನೋತ್ ಕಾವ್ ಶ್ರೀ ಭಗವತಿ ದೇವಸ್ಥಾನದ ಆರಾಟ್ ಮಹೋತ್ಸವ ಅಂಗವಾಗಿ ಸರ್ವೈಶ್ವರ್ಯ ಬೆಳಕಿನಪೂಜೆ ನೆರವೇರಿತು. ಧಾರ್ಮಿಕ ಮುಂದಾಳು, ಕೊಪ್ಪಳ ಚಂದ್ರಶೇಖರನ್ ಮಾಸ್ಟರ್ ನೇತೃತ್ವ ವಹಿಸಿದ್ದರು.
ನಡುದೀಪೋತ್ಸವ ಅಂಗವಾಗಿ ಏ. 26ರಂದು ದೇವಸ್ಥಾನದ ಕುಂಡೋಲಂ ಪಾರ ಪ್ರದೇಶ ಹೊರೆಕಾಣಿಕೆ ಸವೀಕ್ಷಣಾ ಸಮಿತಿಯಿಂದ ಪಾರಾ ಪ್ರದೇಶ ಹಸಿರುವಾಣಿ ಸಮರ್ಪಣಾ ಮೆರವಣಿಗೆ, 27ರಂದು ಶ್ರೀದೇವರ ತಿಡಂಬು ನೃತ್ಯ ನಡೆಯುವುದು. 28ರಂದು ನಗರ ಪ್ರದಕ್ಷಿಣೆ, 29ರಂದು ಬೆಳಗ್ಗೆ 10ಕ್ಕೆ ಅರಾಟು ಮಹೋತ್ಸವ, 29ರಂದು ಪನ್ನಿಕುಲಂ ಚಾಮುಂಡಿ, ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವ ನರ್ತನ ಸಏವೆಯೊಂದಿಗೆ ಉತ್ಸವ ಮುಕ್ತಾಯಗೊಳ್ಳುವುದು.