ಮುಂಬೈ: 'ವಾಯುಪಡೆಗೆ ಈಚೆಗಷ್ಟೇ ಸೇರಿಸಿರುವ ಅಪಾಚೆ ಹೆಲಿಕಾಪ್ಟರ್‌ಗಳು ಸೇನೆಯ ಪಶ್ಚಿಮ ವಲಯದಲ್ಲಿ ವಾಯುದಾಳಿ ಬಲವನ್ನು ಹೆಚ್ಚಿಸಲಿವೆ' ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ: 'ವಾಯುಪಡೆಗೆ ಈಚೆಗಷ್ಟೇ ಸೇರಿಸಿರುವ ಅಪಾಚೆ ಹೆಲಿಕಾಪ್ಟರ್‌ಗಳು ಸೇನೆಯ ಪಶ್ಚಿಮ ವಲಯದಲ್ಲಿ ವಾಯುದಾಳಿ ಬಲವನ್ನು ಹೆಚ್ಚಿಸಲಿವೆ' ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ದಕ್ಷಿಣ ವಲಯದ ಜನರಲ್ ಆಫೀಸರ್ ಇನ್ ಚೀಫ್ ಲೆಫ್ಟಿನಂಟ್ ಜನರಲ್ ಎ.ಕೆ. ಸಿಂಗ್ ಅವರು, 'ಅಪಾಚೆ ಹೆಲಿಕಾಪ್ಟರ್‌ಗಳು ಭಿನ್ನ ಹವಾಮಾನ ಪರಿಸ್ಥಿತಿ, ಭೂ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಲು ಸಮರ್ಥವಾಗಿವೆ. ಸೇನಾ ಕಾರ್ಯಾಚರಣೆಯ ಕಾರ್ಯತತ್ಪರತೆ ಮೇಲೆ ಈ ಹೆಲಿಕಾಪ್ಟರ್‌ಗಳು ಗುರುತರ ಪ್ರಭಾವ ಬೀರಲಿವೆ' ಎಂದು ಹೇಳಿದರು.
ಮಧ್ಯಮ ತೂಕದ, ದಾಳಿ ನಡೆಸಬಲ್ಲ ಈ ಹೆಲಿಕಾಪ್ಟರ್ ಅನ್ನು ದಕ್ಷಿಣ ಕಮಾಂಡ್ ವಲಯಕ್ಕೆ ಇದೇ ಮಾರ್ಚ್ 15ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. ಈ ವಲಯಕ್ಕೆ ಅಪಾಚೆ ಎಚ್-64ಇ ಹೆಲಿಕಾಪ್ಟರ್‌ಗಳನ್ನು ಒದಗಿಲಾಗುತ್ತದೆ ಎಂದರು.
ಒಟ್ಟು ಆರು ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಒದಗಿಸಲು ಬೋಯಿಂಗ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎರಡು ಹಂತಗಳಲ್ಲಿ ಈ ಹೆಲಿಕಾಪ್ಟರ್‌ಗಳು ದೇಶಕ್ಕೆ ಬಂದಿಳಿಯಲಿವೆ ಎಂದು ತಿಳಿಸಿದರು.
ಈ ಹೆಲಿಕಾಪ್ಟರ್‌ಗಳನ್ನು ಹಲವು ಬಗೆಯ ಕಾರ್ಯಾಚರಣೆಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಮತ್ತು ಆಗಸದಿಂದಲೇ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾವಣೆ ಸಾಮರ್ಥ್ಯವನ್ನು ಈ ಹೆಲಿಕಾಪ್ಟರ್ ಹೊಂದಿವೆ ಎಂದರು.