ಮಂಜೇಶ್ವರ : ವರ್ಕಾಡಿಯ ಕಾವೀ: ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾಸರಗೋಡಿನ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ಸದಸ್ಯರಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಸೋಮವಾರ ನಡೆಯಿತು.
ಈ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಕಲಾವಿದರಾದ ಗುರುರಾಜ್ ಕಾಸರಗೋಡು, ದಿಯಾ ಸುಕೇಶ್ ಶೆಟ್ಟಿ, ನವ್ಯಶ್ರೀ ಕುಲಾಲ್, ಧಾನ್ವಿಕಾ ಬಿ ಆರ್, ಸನುಷಾ ಸುಧಾಕರನ್, ಉಷಾ ಸುಧಾಕರನ್, ತೃಪ್ತಿ ಕೆ ಎಸ್, ಶ್ರದ್ಧಾ ಎ ಎಸ್, ಮೇಧಾ ಎ ಎಸ್, ಆದ್ಯಂತ್ ಅಡೂರು, ಹಂಶಿತ್ ಆಳ್ವ, ಅಹನಾ ಎಸ್ ರಾವ್, ದೇವಿಶಾ, ವರ್ಷಾ ಎಂ ಆರ್, ವರ್ಷಾ ಶೆಟ್ಟಿ, ಸನುಷಾ ಸುನಿಲ್, ಜಶಾನ್ವಿ, ಭಾನ್ವಿ ಕುಲಾಲ್ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ವಾಣಿಶ್ರೀ ಕಾಸರಗೋಡು ನಿರ್ವಹಿಸಿದರು. ಈ ಸಂದರ್ಭದಲ್ಲಿ ಗಡಿನಾಡಿನಲ್ಲಿ ಕನ್ನಡ ಭಾಷೆಯ ಸೇವಕ, ಕೃಷಿಕ, ಸಾಹಿತಿ, ಪತ್ರಕರ್ತ, ವ್ಯಂಗ್ಯಚಿತ್ರಕಾರ, ಸಂಘಟಕ, ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ಸಮಾಜಮುಖಿ ಚಟುವಟಿಕೆಯಲ್ಲಿರುವ ಪ್ರಶಾಂತ ರಾಜ ವಿ ತಂತ್ರಿ (ವಿರಾಜ್ ಅಡೂರು) ಅವರನ್ನು ಸಂಸ್ಥೆಯ ವತಿಯಿಂದ ಗಡಿನಾಡ ಚೈತನ್ಯ -2024 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿದುಷಿ ರೇಖಾ ದಿನೇಶ್, ಜಯಂತಿ ಪಿ ರಾಜ್, ಕಾವೀ: ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಸಮಿತಿ ಮುಖಂಡರಾದ ಪ್ರಭಾಕರ ರೈ ವಿಕ್ರಂ ದತ್ತ, ಡಾ. ಶಂಕರ್ ಕೆ ಎಸ್ ಮೊದಲಾದವರು ಇದ್ದರು.