ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಸೇವಾ ಸಮಿತಿಯ ಆಶ್ರಯದಲ್ಲಿ ಮೇ ಒಂದರಂದು ಲೋಕಕಲ್ಯಾಣರ್ಥವಾಗಿ ಶ್ರೀ ಕ್ಷೇತ್ರದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿರುವುದು..ಬೆಳಗ್ಗೆ ಗಣಪತಿ ಹವನ, ಶತ ರುದ್ರಾಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ, ಬಲಿವಾಡ ಕೂಟ, ವಿಶೇಷ ಪ್ರಾರ್ಥನೆ ಮತ್ತು ಜೀರ್ಣೋದ್ಧಾರ ಸಮಿತಿಯು ಹಮ್ಮಿಕೊಂಡ ಜೀರ್ಣೋದ್ಧಾರ ನಿಧಿ ಕೋಪನ್ ಡ್ರಾ ಮತ್ತು ಧಾರ್ಮಿಕ ಸಭೆ ನಡೆಯಲಿರುವುದು. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜಗದ್ಗುರು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಗುರುವಾರ ಹಸ್ತಾಂತರಿಸಿ ಆಶೀರ್ವಾದ ಪಡೆಯಲಾಯಿತು
ಈ ಸಂದರ್ಭದಲ್ಲಿ ಸ್ವಾಮೀಜಿ ಅವರು ಮಾತನಾಡಿ, ಪೆರಡಾಲ ಕ್ಷೇತ್ರದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಶೀಘ್ರವಾಗಿ ನಡೆದು ಬ್ರಹ್ಮಕಲಶ ವೈಭವದಿಂದ ನಡೆಯಲು ಶ್ರೀ ಗೋಪಾಲಕೃಷ್ಣನನು ಅನುಗ್ರಹಿಸಲಿ ಎಂದು ಆಶೀರ್ವದಿಸಿ ಪ್ರಸಾದ ನೀಡಿದರು. ಪೆರಡಾಲ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ನ್ಯಾಯವಾದಿ ವೆಂಕಟರಮಣ ಭಟ್ ಚಂಬಲ್ತಿಮ್ಮಾರ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಿ.ಜಗನ್ನಾಥ ರೈ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಜೀರ್ಣೋದ್ಧಾರ ಸಮಿತಿ ಲೆಕ್ಕಪರಿಶೋಧಕ ಕುಂಞಣ್ಣ ಬದಿಯಡ್ಕ, ಯುವ ಸಮಿತಿ ಕಾರ್ಯದರ್ಶಿ ಭಾಸ್ಕರ. ಪಂಜಿತ್ತಡ್ಕ ಉಪಸ್ಥಿತರಿದ್ದರು.