ನವದೆಹಲಿ: 2022ರಲ್ಲಿ ವಿಶ್ವ ಉದ್ದೀಪನ ದ್ರವ್ಯ ನಿಗ್ರಹ ಸಂಸ್ಥೆ (ವಾಡಾ) ನಡೆಸಿರುವ ಪರೀಕ್ಷೆಗಳಲ್ಲಿ ಸಿಕ್ಕಿಬಿದ್ದಿರುವ ಅತ್ಲೀಟ್ ಗಳ ಪೈಕಿ ಭಾರತೀಯರ ಸಂಖ್ಯೆ ಅತ್ಯಧಿಕವಾಗಿದೆ ಎಂದು ಅದು ಬಿಡುಗಡೆಗೊಳಿಸಿರುವ ಅಂಕಿಸಂಖ್ಯೆಗಳು ತಿಳಿಸಿವೆ.
ನವದೆಹಲಿ: 2022ರಲ್ಲಿ ವಿಶ್ವ ಉದ್ದೀಪನ ದ್ರವ್ಯ ನಿಗ್ರಹ ಸಂಸ್ಥೆ (ವಾಡಾ) ನಡೆಸಿರುವ ಪರೀಕ್ಷೆಗಳಲ್ಲಿ ಸಿಕ್ಕಿಬಿದ್ದಿರುವ ಅತ್ಲೀಟ್ ಗಳ ಪೈಕಿ ಭಾರತೀಯರ ಸಂಖ್ಯೆ ಅತ್ಯಧಿಕವಾಗಿದೆ ಎಂದು ಅದು ಬಿಡುಗಡೆಗೊಳಿಸಿರುವ ಅಂಕಿಸಂಖ್ಯೆಗಳು ತಿಳಿಸಿವೆ.
ಮೂತ್ರ, ರಕ್ತ ಮತ್ತು ಅತ್ಲೀಟ್ ಗಳ ಜೈವಿಕ ಪಾಸ್ಪೋರ್ಟ್ ಗಳು ಸೇರಿದಂತೆ ಭಾರತೀಯರಿಂದ ಒಟ್ಟು 4,064 ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಅದೂ ಅಲ್ಲದೆ, ಇಪಿಒ-ರಿಸೆಪ್ಟರ್ ಅಗೋನಿಸ್ಟ್ಸ್ (ಇಆರ್‌ಎ) ಪರೀಕ್ಷೆಗಳಲ್ಲಿ ವಿಫಲವಾದ ಮಾದರಿಗಳ ಪೈಕಿ ಗರಿಷ್ಠ ಮಾದರಿಗಳು ಭಾರತಕ್ಕೆ ಸೇರಿವೆ. ಅಂದರೆ, 11 ಮಾದರಿಗಳಲ್ಲಿ ಅಥವಾ 1.8 ಶೇಕಡ ಮಾದರಿಗಳು 'ಅಡ್ವರ್ಸ್ ಅನಾಲಿಟಿಕಲ್ ಫೈಂಡಿಂಗ್ಸ್ (ಎಎಎಫ್)' ಅಂದರೆ ಪ್ರತಿಕೂಲ ಫಲಿತಾಂಶಗಳನ್ನು ನೀಡಿವೆ.
ನಂತರದ ಸ್ಥಾನದಲ್ಲಿ ಇರುವುದು ದಕ್ಷಿಣ ಆಫ್ರಿಕ. ಅದರ 4,169 ಮಾದರಿಗಳ ಪೈಕಿ 80 ಮಾದರಿಗಳು ಅಥವಾ 2.04 ಶೇಕಡ ಮಾದರಿಗಳು ಪರೀಕ್ಷೆಯಲಿ ವಿಫಲವಾಗಿವೆ.
ಗರಿಷ್ಠ, ಅಂದರೆ 17,357 ಮಾದರಿಗಳನ್ನು ಚೀನಾ ಪರೀಕ್ಷೆಗೆ ಒಳಪಡಿಸಿತ್ತು. ಆ ಪೈಕಿ ಕೇವಲ 0.25 ಶೇಕಡ ಮಾದರಿಗಳು ವಿಫಲವಾಗಿವೆ.