ಕಾಸರಗೋಡು: ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯ ಮುಖ್ಯಪ್ರಾಣ ದೇವಸ್ಥಾನದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗು ವಾರ್ಷಿಕ ಶ್ರೀ ರಾಮ ನವಮಿ ಹನುಮ ಜಯಂತಿಯ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಚಿತ್ತೈಸಿದ ಶ್ರೀ ಸುಬ್ರಹ್ಮಣ್ಯ ಮಠಾಧೀಶ ಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸ್ವಾಮೀಜಿಯವರು ಆಶೀರ್ವಚನ, ಫಲಮಂತ್ರಾಕ್ಷತೆ ನೀಡಿದರು.
ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಏ.22 ರಂದು ಬೆಳಗ್ಗೆ ನಡೆ ತೆರೆದ ಬಳಿಕ ಅಭಿಷೇಕ ಇತ್ಯಾಧಿ ವಿಧಿವಿದಾನಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನದಾನ, ಸಂಜೆ ಭಜನೆ, ಹುಲ್ಪೆ ಸಮರ್ಪಣೆ, ರಾತ್ರಿ ನೃತ್ಯ ಕಾರ್ಯಕ್ರಮ, ಮಹಾಪೂಜೆ ಜರಗಿತು.