ಕೋಲ್ಕತ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ವಿಚಾರದಲ್ಲಿ ರಾಜ್ಯಪಾಲ ಸಿ. ವಿ ಆನಂದ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿ, ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಅಯೋಗಕ್ಕೆ ದೂರು ನೀಡಿದೆ.
ಕೋಲ್ಕತ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ವಿಚಾರದಲ್ಲಿ ರಾಜ್ಯಪಾಲ ಸಿ. ವಿ ಆನಂದ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿ, ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಅಯೋಗಕ್ಕೆ ದೂರು ನೀಡಿದೆ.
'ಚುನಾವಣೆ ನಡೆಯಲಿರುವ ಪ್ರದೇಶಗಳಿಗೆ ಮತದಾನದ ದಿನ ಮತ್ತು ಹಿಂದಿನ ದಿನಗಳಲ್ಲಿ ಭೇಟಿ ಕೈಗೊಳ್ಳುವ ಮೂಲಕ ಲೋಕಸಭಾ ಚುನಾವಣೆ ವಿಷಯದಲ್ಲಿ ಪದೇ ಪದೇ ಮಧ್ಯ ಪ್ರವೇಶಿಸುತ್ತಿದ್ದಾರೆ'ಎಂದು ದೂರಿನಲ್ಲಿ ಟಿಎಂಸಿ ಹೇಳಿದೆ.
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಮುನ್ನಾದಿನವಾದ ಏ.18ರಂದು ಉದ್ದೇಶಿತ ಕೂಚ್ ಬಿಹಾರ್ ಪ್ರವಾಸವನ್ನು ರದ್ದುಗೊಳಿಸುವಂತೆ ಆನಂದ ಬೋಸ್ ಅವರಿಗೆ ಚುನಾವಣಾ ಆಯೋಗವು ಸಲಹೆ ನೀಡಿತ್ತು. ಬೋಸ್ ಅವರು ಭೇಟಿ ನೀಡಿದರೆ ಅದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಏ.19ರಂದು ಕೂಚ್ ಬಿಹಾರ್‌ನಲ್ಲಿ ಮತದಾನ ನಡೆಯಲಿದ್ದು ಬಹಿರಂಗ ಪ್ರಚಾರ ಅಂತ್ಯಗೊಂಡಿದೆ.