ಕಾಸರಗೋಡು:ಕೂಡ್ಲು ಮೂಲ ತರವಾಡಿನ ರಾಜದೈವ ಮತ್ತು ಪರಿವಾರ ದೈವಗಳ ಜೀರ್ಣೋಧ್ಧಾರ ಕುರಿತಾದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತಹ ಪರಿಹಾರ ಕಾರ್ಯಗಳಲ್ಲಿ ಒಂದಾದ ಕೂಡ್ಲು ಮೇಳದಿಂದ ಜೋಡಾಟ ಏ.9ರಂದು ರಾತ್ರಿ 10ಕ್ಕೆ ಕೂಡ್ಲು ಗೋಪಾಲಕೃಷ್ಣ ದೇವಸ್ಥಾನ ವಠಾರದಲ್ಲಿ ನಡೆಯಲಿರುವುದು.
ಕೂಡ್ಲು ಶ್ರೀ ಗೋಪಾಲಕೃಷ್ಣ ಮೇಳ ಮತ್ತು ಮಾಣಿಲ ಮೇಳದ ವತಿಯಿಂದ ಶ್ರೀದೇವೀ ಮಹಾತ್ಮೆ ಎಂಬ ಪ್ರಚಂಡ ಜೋಡಾಟ ಪ್ರದರ್ಶನಗೊಳ್ಳಲಿರುವುದು.