ಕಾಸರಗೋಡು: 2024ನೇ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕಾಸರಗೋಡು ಜಿಲ್ಲಾ ಮಾಹಿತಿ ಅಧಿಕಾರಿಯ ನೇತೃತ್ವದಲ್ಲಿ ತಯಾರಿಸಿದ ಚುನಾವಣಾ ಸಹಾಯ ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿಯು ಆದ ಕೆ ಇನ್ಬಾಶೇಖರ್ ಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿಯವರ ಕೊಠಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ, ಜಿಲ್ಲಾ ಮಾಹಿತಿ ಅಧಿಕಾರಿ ಎಂ ಮಧುಸೂದನನ್, ಎಂ.ಸಿ.ಎಂ. ಸಿ. ಸದಸ್ಯರಾದ ಜಿಲ್ಲಾ ನ್ಯಾಯಾಧಿಕಾರಿ ಕೆ ಮಹಮ್ಮದ್ ಕುಂಞÂ್ಞ, ಪ್ರೊ. ವಿ ಗೋಪಿನಾಥ್, ಐ ಟಿ ಮಿಶನ್ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಕಪಿಲ್ ದೇವ್, ಸಹಾಯಕ ಮಾಹಿತಿ ಅಧಿಕಾರಿ ಎ.ಪಿ. ದಿಲ್ನ, ಜಿಲ್ಲಾ ಮಾಹಿತಿ ಕೇಂದ್ರದ ನೌಕರರಾದ ಕೆ ಪ್ರಸೀದ, ಟಿ ಕೆ ಕೃಷ್ಣನ್ ಉಪಸ್ಥಿತರಿದ್ದರು.
ಕಾಸರಗೋಡು ಲೋಕಸಭಾ ಕ್ಷೇತ್ರದ ಸಮಗ್ರ ಮಾಹಿತಿಗಳು ಪ್ರಧಾನ ದೂರವಾಣಿ ಸಂಖ್ಯೆಗಳು, ಚಿತ್ರಗಳು, ಅಬ್ಸರ್ವರ್, ಆರ್ ಓ, ನೋಡಲ್ ಆಫೀಸರ್, ಸೆಕ್ಟರ್ ಆಫೀಸರ್ ಎಂಬಿವರ ಮಾಹಿತಿಗಳು, ಒಟ್ಟು ಮತದಾರರ ಪಟ್ಟಿ, ಮಾದರಿ ನಿಯಮ ಸಂಹಿತೆ, ಐಟಿ ಆಪ್ ಗಳು, ವಿವಿಪ್ಯಾಟ್, ಸ್ವೀಪ್ ಮೊದಲಾದ ವಿವರಗಳನ್ನು ಚುನಾವಣಾ ಮಾರ್ಗದರ್ಶಿ ಒಳಗೊಂಡಿದೆ.