HEALTH TIPS

ಆ್ಯಂಟಿ ಡಿಪೋರ್ಸ್ ಮೆಂಟ್ ಸ್ಕ್ವೇಡ್ ಕಾರ್ಯಾಚರಣೆ-ಅನಧಿಕೃತ ಪ್ರಚಾರಸಾಮಗ್ರಿ ತೆರವು


               ಕಾಸರಗೋಡು: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿರುವುದರ ಅಂಗವಾಗಿ ಜಿಲ್ಲೆಯಲ್ಲಿ ರಚಿಸಲಾಗಿರುವ ಆ್ಯಂಟಿ ಡಿಪೋರ್ಸ್ ಮೆಂಟ್  ಸ್ಕ್ವೇಡ್ ನೇತೃತ್ವದಲ್ಲಿ ಇದುವರೆಗೆ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ 8391 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.

               ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ 8277 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಆ್ಯಂಟಿ ಡಿಫೇಸ್‍ಮೆಂಟ್ ಸ್ಕ್ವಾಡ್‍ಗಳು ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುತ್ತಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಬಹುತೇಕ ಎಲ್ಲಾ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಇವುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿದ್ದ ಏಳು ಭಿತ್ತಿಬರಹಗಳು, 6471 ಪೆÇೀಸ್ಟರ್‍ಗಳು, 622 ಬ್ಯಾನರ್‍ಗಳು, 951 ಧ್ವಜ ಮತ್ತು ಕಂಬ ಇತ್ಯಾದಿ ಒಳಗೊಂಡಿದೆ. ಅಲ್ಲದೆ, ಜಾಗದ ಮಾಲೀಕರ ಅನುಮತಿಯಿಲ್ಲದೆ ಖಾಸಗಿ ಸ್ಥಳದಲ್ಲಿ ಇರಿಸಲಾದ ಪ್ರಚಾರ ಸಾಮಗ್ರಿಗಳನ್ನು ದೂರಿನ ಆಧಾರದ ಮೇಲೆ ತೆಗೆದುಹಾಕಲಾಗುತ್ತದೆ. ಈ ರೀತಿಯಾಗಿ 92 ಪೆÇೀಸ್ಟರ್‍ಗಳು, 11 ಫ್ಲಕ್ಸ್‍ಗಳು ಮತ್ತು 11 ಧ್ವಜಸ್ತಂಭಗಳು ಸೇರಿದಂತೆ 114 ಪ್ರಚಾರ ಸಾಮಗ್ರಿಗಳನ್ನು ಸ್ಕ್ವೇಡ್ ತೆರವುಗೊಳಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries