HEALTH TIPS

ನೆನಪೇ ವ್ಯಕ್ತಿತ್ವಕ್ಕೆ ಅಡಿಪಾಯ : ಸಾಹಿತಿ ಗುರುರಾಜ ಮಾರ್ಪಳ್ಳಿ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ `ಸ್ವರೂಪ ಶಿಕ್ಷಣ ಸ್ಮøತಿ ಮಂಟಪ' ಎಂಟುದಿನಗಳ ಶಿಬಿರ ಆರಂಭ

              ಬದಿಯಡ್ಕ: ಉತ್ತಮ ಶಿಕ್ಷಣವನ್ನು ನೀಡುವ ಶಾಲೆಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೇವಲ ಶಿಕ್ಷಣವನ್ನು ಮಾತ್ರ ನೀಡದೇ ಓರ್ವ ವಿದ್ಯಾರ್ಥಿಯ ಅಂತರಾಳದಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕಂಡುಕೊಳ್ಳುವುದೂ ಬಹುಮುಖ್ಯವಾಗಿದೆ ಎಂದು ನೀರ್ಚಾಲು ಜ್ಯಾಕ್ ಟೇಯ್ಲ್ಸ್ ಇಂಡಸ್ಟ್ರೀಸ್ ಮಾಲಕ ಅಜೇಯ್ ಶಂಕರ್ ಖಂಡಿಗೆ ಹೇಳಿದರು.

           ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸೋಮವಾರ ಆರಂಭಗೊಂಡ ಸ್ವರೂಪ ಶಿಕ್ಷಣ ಸ್ಮøತಿ ಮಂಟಪ ಎಂಟು ದಿನಗಳ ಶಿಬಿರವನ್ನು ದೀಪಬೆಳಗಿಸಿ ಚಾಲನೆಯನ್ನು ನೀಡಿ ಅವರು ಮಾತನಾಡಿದರು.


 

           ಇದೇ ಶಾಲಾ ಹಳೆವಿದ್ಯಾರ್ಥಿಯಾಗಿದ್ದ ಅವರು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ ಮಾತನಾಡಿದರು. ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಸುಮಾಡ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ,  ಜೀವನದಲ್ಲಿ ಉನ್ನತಿಯನ್ನು ಕಾಣುವುದು ಹೇಗೆ? ಕೇವಲ ನಾಲ್ಕು ಗೋಡೆಗಳ ಮಧ್ಯ ಅಲ್ಲ. ಜೀವನ, ಕಲಿಯುವುದು ಹೇಗೆ ಎಂಬುದನ್ನು ಕಲಿಸುವುದೇ ಈ ಶಿಬಿರದ ಉದ್ದೇಶವಾಗಿದೆ. ನಮ್ಮದೇ ಆದ ಚಿಂತನೆಗಳನ್ನು ಮಕ್ಕಳಲ್ಲಿ ಪ್ರಯೋಗಿಸಿ ಅದರಿಂದ ಯಶಸ್ಸನ್ನು ಕಂಡಿದ್ದೇವೆ ಎಂದರು. 

         ಸಾಹಿತಿ ಗುರುರಾಜ ಮಾರ್ಪಳ್ಳಿ ಮುಖ್ಯ ಅತಿಥಿಗಳಾಗಿ ಮಾತನಾಡಿ,  ಇಂದು ಶಿಕ್ಷಣದಲ್ಲಿ ಸರ್ಟಿಫಿಕೇಟ್‍ಗೆ ಬದಲಾಗಿ ಅನುಭವ ಕಲಿಕೆ ಬೇಕಾಗಿದೆ. ಆಯಾ ಶಾಲೆಯವರಿಗೆ ಬೇಕಾದ ಪಠ್ಯಕ್ರಮ, ಪರೀಕ್ಷಾ ಪದ್ಧತಿಯನ್ನು ಆರಿಸುವ ಸ್ವಾತಂತ್ರ್ಯ ಇರಬೇಕು. ವಿಭಿನ್ನ ಅನುಭವಕ್ಕೆ ತೆರೆದುಕೊಳ್ಳುವ ಶಿಕ್ಷಣ ಸ್ವರೂಪದಲ್ಲಿ ಸಿಗುತ್ತದೆ. ಮನುಷ್ಯನ ನೆನಪೇ ಆತನ ವ್ಯಕ್ತಿತ್ವಕ್ಕೆ ಅಡಿಪಾಯ. ನಾವು ಯಾರು ಎಂಬುದು ನಮಗೆ ಯಾವತ್ತೂ ನೆನಪಿರುತ್ತದೆ. ಅದೇ ರೀತಿ ನಮ್ಮ ಜೀವನದ ಎಲ್ಲಾ ಆಗುಹೋಗುಗಳು ಸದಾ ನೆನಪಿರುವಂತಿರಬೇಕು. ಸ್ವರೂಪ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಚಂಡವಾದ ಬದಲಾವಣೆ ಸಾಧ್ಯ ಎಂಬುದನ್ನು ಅವರು ತಿಳಿಸಿದರು.


          ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಪಜಿಲ ಮಾತನಾಡಿ, ಕಲಿಕೆ ನಿರಂತರವಾದುದು ಇದಕ್ಕೆ ರಜೆ ಇಲ್ಲ. ಈ ಎಂಟು ದಿನಗಳ ಶಿಬಿರದಲ್ಲಿ ನಿಮ್ಮ ಸಾಮಥ್ರ್ಯಗಳು ಖಂಡಿತ ರ್ವಸುತ್ತವೆ, ಸಾಧನೆಯ ಕನಸುಗಳು ಹುಟ್ಟಿಕೊಳ್ಳುತ್ತವೆ ಎಂದರು. ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಫೆÇೀನ್ ನಂಬರ್ ಮ್ಯಾಜಿಕ್ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಧ್ವನಿ ವರ್ಧಕವನ್ನು ಹಸ್ತಾಂತರಿಸುವ ಮೂಲಕ ಶಿಬಿರದ ಸಂಚಾಲಕತ್ವವನ್ನು ಗೋಪಾಡ್ಕರ್ ಅವರಿಗೆ ವಿಶಿಷ್ಟ ರೀತಿಯಲ್ಲಿ ಸಾಂಕೇತಿಕವಾಗಿ ವರ್ಗಾಯಿಸಿದರು. ವಿದ್ಯಾರ್ಥಿ ಹರ್ಷಿತ ಸ್ವಾಗತಿಸಿ, ಪ್ರದ್ಯೂಷ್ ಕೆದಿಲಾಯ ವಂದಿಸಿದರು. ನಿಹಾರಿಕ ಕಾರ್ಯಕ್ರಮ ನಿರ್ವಹಣೆ ಮಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries