ಕೊಲ್ಲಂ: ಶ್ರೀ ಅಯ್ಯಪ್ಪ ಸೋಶಿಯಲ್ ಸರ್ವಿಸ್ ಸೊಸೈಟಿ ಆಯೋಜಿಸಿದ್ದ 'ಐಕಾನ್ಸ್-2024' ವಿಶುಕೈನೀಟ್ಟಂ ಪ್ರಶಸ್ತಿ ಪತ್ತನಂತಿಟ್ಟ ಲೋಕಸಭೆ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಅನಿಲ್ ಕೆ. ಆಂಟನಿ ಅವರಿಗೆ ಒದಗಿಬಂದಿದೆ. ಆರ್ಟ್ ಐಕಾನ್ ಪ್ರಶಸ್ತಿಗಾಗಿ ಸ್ಪೀಡ್ ಕಾರ್ಟೂನಿಸ್ಟ್ ಡಾ. ಜಿತೇಶ್ ಮತ್ತು ಸಮಾಜದೇವಕ ಡಾ. ಎಂ.ಎಸ್. ಸುನಿಲ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ರೂ 25,000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ. ಏ.17ರಂದು ಬೆಳಗ್ಗೆ ಪತ್ತನಂತಿಟ್ಟದ ಅಬಾನ್ ಆಡಿಟೋರಿಯಂನಲ್ಲಿ ನಡೆಯುವ 'ಮೆರಿಟ್ ಕಾನ್‍ಕ್ಲೇವ್-2024' ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕ ಮೇಜರ್ ರವಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಮಾಜಿಕ-ಸಾಂಸ್ಕøತಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.