HEALTH TIPS

ಕಾಞಂಗಾಡಿಗೆ ಆಗಮಿಸಿದ ಸ್ಮøತಿ ಇರಾನಿ: ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ-ಎನ್‍ಡಿಎ ಸಮಾವೇಶದಲ್ಲಿ ಕೇಂದ್ರಸಚಿವೆ ಸ್ಮೃತಿ ಇರಾನಿ ಅಭಿಪ್ರಾಯ

                  ಕಾಸರಗೋಡು: ನರೇಂದ್ರ ಮೋದಿ ಆಡಳಿತದಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದುಬರಲಿರುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. 

                   ಅವರು ಕಾಞಂಗಾಡು ನಾರ್ತ್‍ಕೋಟಚ್ಚೇರಿಯಲ್ಲಿ ಎನ್‍ಡಿಎ ಸಮಾವೇಶ ಉದ್ಘಾಟಿಸಿ, ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.


                  ಪ್ರಧಾನಿ ನರೇಂದ್ರಮೋದಿ ಅವರಿಗೆ ಸವಾಲೆಸೆಯುವ ಜನರಲ್ಲಿ ತಮ್ಮ ನಾಯಕ ಯಾರು ಮತ್ತು ಅವರ ಅಜೆಂಡಾ ಏನು ಎಂದು ಕೇಳಿದರೆ ಉತ್ತರವಿಲ್ಲ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಸೀಟುಗಳಿಗಾಗಿ ಪರಸ್ಪರ ಕಚ್ಚಾಡುತ್ತಿದ್ದರೆ,  ಕೇಂದ್ರದಲ್ಲಿ ಅಧಿಕಾರಕ್ಕಾಗಿ ಆಲಂಗಿಸಿಕೊಳ್ಳುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಸಹಕಾರಿ ಸಚಿವಾಲಯವನ್ನು ರಚಿಸುತ್ತಿದ್ದಂತೆ, ಕೇರಳದಲ್ಲಿ ಸಹಕಾರಿ ಬ್ಯಾಂಕ್‍ಗಳನ್ನು ಲೂಟಿ ಮಾಡಲಾಗುತ್ತಿದೆ. ಕರುವನ್ನೂರಿನಲ್ಲಿ ಸಿಪಿಎಂ, ಕುಂಡ್ಲಾದಲ್ಲಿ ಸಿಪಿಐ ಮತ್ತು ಮಲಪ್ಪುರಂನಲ್ಲಿ ಮುಸ್ಲಿಂಲೀಗ್,   ವಯನಾಡಿನಲ್ಲಿ ಕಾಂಗ್ರೆಸ್ ಸೇರಿಕೊಂಡು ಸಹಕಾರಿ ಬ್ಯಾಂಕ್‍ಗಳ ಹಗಲುದರೋಡೆ ನಡೆಸಿದೆ. ಸಹಕಾರಿ ಬ್ಯಾಂಕ್ ಹಗಲುದರೋಡೆಯಿಂದ ತೊಡಗಿ ಚಿನ್ನದ ಕಳ್ಳಸಾಗಣೆಯವರೆಗಿನ ಹಗರಣದಲ್ಲಿ ಐಎನ್‍ಡಿಐಎ ಮೈತ್ರಿ ಪಕ್ಷಗಳ ಪಾಲುದಾರಿಕೆಯಿದೆ.  ಕೇರಳದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಾಗೂ ಅಮೃತ್ ನಿಲ್ದಾಣ ಯೋಜನೆಯಲ್ಲಿ ಕಾಸರಗೋಡು ರೈಲು ನಿಲ್ದಾಣದ ಅಭಿವೃದ್ಧಿ ನರೇಂದ್ರ ಮೋದಿ ಸರ್ಕಾರದಿಂದ ಸಾಧ್ಯವಾಯಿತು. ಭ್ರಷ್ಟಾಚಾರದ ವಿರುದ್ಧ ಎನ್‍ಡಿಎ ಸರ್ಕಾರದ ನಡೆ, ಪ್ರತಿಪಕ್ಷಗಳಲ್ಲಿ ಭೀತಿಯನ್ನು ತಂದೊಡ್ಡಿದೆ. ದೇಶ ಇಂದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲಾಗದ ಸ್ಥಿತಿಯಿದೆ ಎಂದು ತಿಳಿಸಿದರು.

           ಎನ್‍ಡಿಎ ಅಧ್ಯಕ್ಷ ವಕೀಲ ಎಂ. ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬಿಡಿಜೆಎಸ್ ರಾಜ್ಯ ಕಾರ್ಯದರ್ಶಿ ಇ. ಮನೀಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ, ವಕೀಲ  ಕೆ. ಶ್ರೀಕಾಂತ್, ಕಾಸರಗೋಡು ಲೋಕಸಭೆಯ ಎನ್‍ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು,  ರಾಷ್ಟ್ರೀಯ ಸಮಿತಿ ಸದಸ್ಯರಾದ ಎಂ. ಸಂಜೀವ ಶೆಟ್ಟಿ, ಪ್ರಮೀಳಾ ಸಿ.ನಾಯ್ಕ್,  ಪ್ರಾಂತ ಪ್ರಧಾನ ಕಾರ್ಯದರ್ಶಿ ಪಿ. ಸುರೇಶ್ ಕುಮಾರ್ ಶೆಟ್ಟಿ, ಪ್ರಾದೇಶಿಕ ಕಾರ್ಯದರ್ಶಿ ಕೆ.ಪಿ.ಅರುಣ್ ಮಾಸ್ಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಬಿಡಿಜೆಎಸ್ ಜಿಲ್ಲಾಧ್ಯಕ್ಷಗಣೇಶ ಪರಕಟ್ಟಾ, ಆರ್‍ಎಲ್‍ಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣನ್ ವಾಳುನ್ನೋರಡಿ, ಶಿವಸೇನೆ ಜಿಲ್ಲಾ ಸಂಯೋಜಕ ಜಯರಾಜ್, ಎಲ್‍ಜೆಪಿ ಜಿಲ್ಲಾಧ್ಯಕ್ಷ ಅರವಿಂದಾಕ್ಷನ್, ಎಸ್‍ಜೆಡಿ ಜಿಲ್ಲಾಧ್ಯಕ್ಷ ರಾಮಕೃಷ್ಣನ್ ಆಚಾರಿ ಮೊದಲಾದವರು  ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries